fraud 
ಉಡುಪಿ

ಲಾರಿ ಖರೀದಿಸಿ ಹಣ ನೀಡದೆ ವಂಚನೆ

ಇಂದಿರಾ ಎನ್ ಕೆ
ಪಡುಬಿದ್ರಿ: ಮೂಲ್ಕಿಯ ಭಾಸವರಾಜ ಜಿ.ಹುನಕುಂಟಿ ಎಂಬುವರಿಂದ ಶಾಮೀರ್ ಪಾಶ ಎಂಬುವರು ಲಾರಿ ಖರೀದಿಸಿ 3,15,000 ರೂ. ಬಾಕಿ ಹಣ ನೀಡದೆ ವಂಚಿಸಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾಸವರಾಜ ಆರೋಪಿ ಶಾಮೀರ್‌ಗೆ ಲಾರಿ ಮಾರಾಟ ಮಾಡಿದ್ದು, 35 ಸಾವಿರ ರೂ.ಗಳನ್ನು ಚೆಕ್ ರೂಪದಲ್ಲಿ ಹಾಗೂ 20 ಸಾವಿರ ರೂ. ನಗದಾಗಿ ನೀಡಿದ್ದು, ಉಳಿದ ಹಣವನ್ನು ನಂತರ ಕೊಡುತ್ತೇನೆ ಎಂದು ಮೌಖಿಕ ಒಪ್ಪಂದ ಮಾಡಿಕೊಂಡು ಲಾರಿಯನ್ನು ತನ್ನ ಸ್ವಾಧೀನಕ್ಕೆ ಪಡೆದಿದ್ದರು. ನಂತರ ಮೌಖಿಕ ಒಪ್ಪಂದ ಮಾಡಿಕೊಂಡಂತೆ ಬಾಕಿ ಹಣ ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ಭಾಸವರಾಜ ತಿಳಿಸಿದ್ದಾರೆ.