ಕುಳೂರು ಸಂತಡ್ಕ ಕ್ಷೇತ್ರದಲ್ಲಿ ಯೋಗೀಶ್ ಕಲ್ಯಾಣತ್ತಾಯ ಕುಳೂರು, ಅನಂತನಾರಾಯಣ ಭಟ್ ಪರಕ್ಕಜೆ ನೇತೃತ್ವದಲ್ಲಿ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ನಡೆಯಿತು.  
ಉಡುಪಿ

ಹಿರಿಯರನ್ನು ಮರೆತರೆ ನಮ್ಮತನ ಮರೆತಂತೆ

ಇಂದಿರಾ ಎನ್ ಕೆ
ಮಂಜೇಶ್ವರ: ಸನಾತನ ಧರ್ಮ ಹೇಗೆ ಇರಬೇಕು ಎನ್ನುವುದಕ್ಕೆ ಸಾಕ್ಷಿ ಸಂತಡ್ಕ. ಗಿರಿಜಾ ಕಲ್ಯಾಣವೆಂದರೆ ಲೋಕ ಕಲ್ಯಾಣ. ಹಿರಿಯರನ್ನು ಮರೆತರೆ ನಮ್ಮತನ ಮರೆತಂತೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕುಳೂರು ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದ ಭೋಜನ ಶಾಲೆ ಉದ್ಘಾಟನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹೃದಯದಲ್ಲಿ ಶ್ರದ್ಧೆ ಮತ್ತು ಭಕ್ತಿಯ ಬೀಜ ಬಿತ್ತಿದರೆ ಮನಃಶಾಂತಿಯ ಫಲ ಸಿಗುತ್ತದೆ ಎಂದರು.
ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಭೋಜನ ಶಾಲೆ ಉದ್ಘಾಟಿಸಿದರು. ಡಾ.ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು.
ಕುಡುಪು ಕೃಷ್ಣರಾಜ ತಂತ್ರಿ, ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೆ.ಸಿ.ಜಯ ಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಆದಿಶಕ್ತಿ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಅಧ್ಯಕ್ಷ ಹರೀಶ್ ಉಳ್ಳಾಲ, ಕರ್ನಾಟಕ ಲೋಕಾಯುಕ್ತ ದ.ಕ. ಜಿಲ್ಲೆಯ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ, ಧಾರ್ಮಿಕ ಮುಂದಾಳು ಕೃಷ್ಣಪ್ಪ ಪೂಜಾರಿ, ಬಾಲಕೃಷ್ಣ ಭಂಡಾರಿ ಕೆ.ದಡ್ಡಂಗಡಿ ಉಪಸ್ಥಿತರಿದ್ದರು.
ದಡ್ಡಂಗಡಿ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿದರು. ರಾಮಕೃಷ್ಣ ಎಸ್. ವಂದಿಸಿದರು. ತೇಜಶ್ರೀ ಸಂತಡ್ಕ ಪಾರ್ಥಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು. ಯೋಗೀಶ್ ಕಲ್ಯಾಣತ್ತಾಯ ಕುಳೂರು, ಅನಂತನಾರಾಯಣ ಭಟ್ ಪರಕ್ಕಜೆ ನೇತೃತ್ವದಲ್ಲಿ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ನಡೆಯಿತು.