Fine 
ಉಡುಪಿ

ತ್ಯಾಜ್ಯ ಎಸೆದಾತಗೆ ಆರ್ಯಾಪು ಗ್ರಾ.ಪಂ. ದಂಡ

ಪುತ್ತೂರು ಗ್ರಾಮಾಂತರ: ಆಟೋ ರಿಕ್ಷಾದಲ್ಲಿ ಮನೆಯ ತ್ಯಾಜ್ಯ ತಂದು ರಾಷ್ಟ್ರೀಯ ಹೆದ್ದಾರಿಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋದ ವ್ಯಕ್ತಿಗೆ ಆರ್ಯಾಪು ಗ್ರಾಮ ಪಂಚಾಯಿತಿಯವರು ದಂಡ ವಿಧಿಸುವ ಜತೆಗೆ ಎಸೆದ ತ್ಯಾಜ್ಯವನ್ನು ಆತನಿಂದಲೇ ತೆರವು ಮಾಡಿಸಿದ ಘಟನೆ ಸೋಮವಾರ ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಕಲ್ಲರ್ಪೆಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಆಟೋವೊಂದರಲ್ಲಿ ತ್ಯಾಜ್ಯ ತುಂಬಿದ ಚೀಲವನ್ನು ತಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲರ್ಪೆಯಲ್ಲಿ ಎಸೆದು ಹೋಗಿದ್ದರು. ತ್ಯಾಜ್ಯ ಎಸೆದು ಹೋಗುತ್ತಿರುವುದನ್ನು ಗಮನಿಸಿದ ಅದೇ ರಸ್ತೆಯಾಗಿ ಪುತ್ತೂರಿಗೆ ಬರುತ್ತಿದ್ದ ತಾಲೂಕು ಪಂಚಾಯಿತಿ ಸಿಬ್ಬಂದಿ, ತ್ಯಾಜ್ಯ ಎಸೆದ ಆಟೋ ರಿಕ್ಷಾವನ್ನು ಹಿಂಬಾಲಿಸಿ ಹೋಗಿ ತಡೆದು ನಿಲ್ಲಿಸಿ ಆರ್ಯಾಪು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರು.
ಆರ್ಯಾಪು ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ತ್ಯಾಜ್ಯ ಎಸೆದ ರಿಕ್ಷಾ ಚಾಲಕನಿಗೆ 5 ಸಾವಿರ ರೂ. ದಂಡ ವಿಧಿಸಿದ್ದಲ್ಲದೆ, ಆತನಿಂದಲೇ ಕಸವನ್ನು ತೆಗೆಸಿ ಎಚ್ಚರಿಕೆ ನೀಡಿದ್ದಾರೆ.