ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಾರ್ಷಿಕ ಪತ್ರಿಕೆ ಜ್ಯೋತಿಷ್ಮತಿಯನ್ನು ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಬಿಡುಗಡೆಗೊಳಿಸಿದರು. ಪ್ರಮುಖರಾದ ಶರಣ ಕುವಾರ, ರಾಹುಲ್ ಈಶ್ವರ್, ರಮೇಶ ವೈದ್ಯ, ಬಾಲಚಂದ್ರ ಭಟ್ ಮತ್ತಿತರರು ಇದ್ದರು.
ಕುಂದಾಪುರ: ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಪಾಲಕರ ಬೇಡಿಕೆಯಂತೆ ನೂತನವಾಗಿ ‘ಸದ್ಯೋಜಾತ’ ವಸತಿ ನಿಲಯ ನಿರ್ಮಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಕೊಡುವ ಪ್ರಯತ್ನದಲ್ಲಿದ್ದೇವೆ. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಯಾವ ಶಿಸ್ತನ್ನು ರೂಢಿಸಿಕೊಂಡಿರುವರೋ ಅದನ್ನು ಮನೆಯಲ್ಲೂ ಮುಂದುವರಿಸಲು ಪಾಲಕರು ಪ್ರೇರೇಪಿಸಬೇಕು ಎಂದು ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಅಧ್ಯಕ್ಷ ಎಲ್.ಟಿ.ತಿಮ್ಮಪ್ಪ ಹೇಳಿದರು.
ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಶಿಕ್ಷಕರ ಮತ್ತು ಆಡಳಿತ ಮಂಡಳಿ ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆ ಪ್ರಾಂಶುಪಾಲ ಶರಣ ಕುಮಾರ, ಫಿನ್‌ಲ್ಯಾಂಡ್‌ನ ಶಿಕ್ಷಣ ಪ್ರತಿನಿಧಿ ರಾಹುಲ್ ಈಶ್ವರ್ ಮಾತನಾಡಿದರು. ಕರ್ಣಾಟಕ ಬ್ಯಾಂಕ್‌ನ ಸಹಾಯಕ ಮಹಾ ವ್ಯವಸ್ಥಾಪಕ ರಮೇಶ ವೈದ್ಯ ಶಾಲೆಯ ಅಭಿವೃದ್ಧಿಗೆ 10 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು. ಪಾಲಕರಾದ ಭರತ ಕುಮಾರ ಅನುಭವ ಹಂಚಿಕೊಂಡರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಉಪಾಧ್ಯಕ್ಷ ಬಾಲಚಂದ್ರ ಭಟ್, ಟ್ರಸ್ಟಿಗಳಾದ ಪ್ರೊ.ಎಸ್.ನಾರಾಯಣ ರಾವ್, ನಾರಾಯಣ ಶೆಟ್ಟಿ, ಶಾಲೆ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಶೈಕ್ಷಣಿಕ ಸಲಹೆಗಾರ್ತಿ ಸುಜಾತಾ ಸದಾರಾಮ್, ಮುಖ್ಯಶಿಕ್ಷಕಿ ಹೇಮಾಲಿನಿ ಉಪಸ್ಥಿತರಿದ್ದರು. ಜಯಂತ ಶ್ಯಾನುಭಾಗ್ ಸ್ವಾಗತಿಸಿದರು. ಶಶಿಕಲಾ ಶೆಟ್ಟಿ ನಿರೂಪಿಸಿದರು. ರಂಜಿತಾ ವಂದಿಸಿದರು.