ಕಾಪುವಿನಲ್ಲಿ ನಡೆದ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಿ ಕೆ.ಎಲ್.ಕುಂಡಂತಾಯ ಮಾತನಾಡಿದರು. ಪ್ರಮುಖರಾದ ಡಾ.ವೈ.ಎನ್.ಶೆಟ್ಟಿ, ಪುಂಡಲೀಕ ಮರಾಠೆ, ಪೂರ್ಣಿಮಾ, ಮೋಹಿನಿ ಶೆಟ್ಟಿ, ನೀಲಕಂಠ ಮೇಸ್ತ, ಬಿ.ಜನಾರ್ದನ ಭಟ್, ಆಲ್ಬನ್ ರೋಡ್ರಿಗಸ್, ಬಾಬು ಕೊರಗ ಮತ್ತಿತರರಿದ್ದರು. 
ಉಡುಪಿ

ಸಾಹಿತ್ಯ ಸಮ್ಮೇಳನದಿಂದ ಜಾನಪದ ವಿಮರ್ಶೆ

ಕನ್ನಡ ಸಾಹಿತ್ಯ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಜಾನಪದವೆಂದರೆ ಸರಳ, ಮುಗ್ಧ ಮತ್ತು ವಿಮರ್ಶೆಗೆ ಒಳಗಾಗದ ವಿಷಯ. ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ಜಾನಪದದ ವಿಮರ್ಶೆಯಾಗುತ್ತಿರುವುದು ಸ್ತುತ್ಯರ್ಹ ಎಂದು ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಹೇಳಿದರು.

ಕಾಪು ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಧರ್ಮಾನಂದ ಶಿರ್ವ ಅವರ ‘ಚಿಪ್ಪೊಡೆಯದ ಮುತ್ತು’ ಹಾಗೂ ಶ್ರೀನಿವಾಸ ಪ್ರಭು ಅವರ ಕವನ ಸಂಕಲನ ‘ಅಂತರಂಗದ ಕಣ್ಣು ತೆರೆದಾಗ’ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಡಾ.ವೈ.ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ ಸಾಹಿತ್ಯ ಧ್ವಜವನ್ನು ಸರ್ವಾಧ್ಯಕ್ಷರಿಗೆ ಹಸ್ತಾಂತರಿಸಿದರು.

ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಪು ಪುರಸಭಾ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಾಹಿತಿ ಬಿ.ಜನಾರ್ದನ ಭಟ್, ದಂಡತೀರ್ಥ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್ ಶುಭಾಶಂಸನೆಗೈದರು. ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ಹಾಗೂ ಪುಂಡಲೀಕ ಮರಾಠೆ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಬಾಬು ಕೊರಗ, ಕಟ್ಟಿಂಗೇರಿ ದೇವದಾಸ ಹೆಬ್ಬಾರ್, ಪ್ರಭಾಕರ ಶೆಟ್ಟಿ ಕೊಂಡಳ್ಳಿ ಉಪಸ್ಥಿತರಿದ್ದರು.

ರಾಕೇಶ್ ಕುಂಜೂರು ಸ್ವಾಗತಿಸಿದರು. ಗೋಪಾಲಕೃಷ್ಣ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಕೆ.ಆರ್.ಪಾಟ್ಕರ್ ಸಮ್ಮೇಳನ ಅಧ್ಯಕ್ಷರನ್ನು, ದೀಪಕ್ ಬೀರ ಕೃತಿಕಾರರನ್ನು ಪರಿಚಯಿಸಿದರು. ಸುಧಾಕರ ಶೆಣೈ ಪಿಲಾರು ನಿರೂಪಿಸಿದರು. ವಿದ್ಯಾದರ ಪುರಾಣಿಕ್ ವಂದಿಸಿದರು.

ವಿಚಾರಗೋಷ್ಠಿ, ಸಂವಾದ

ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಾದೇವಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಕಾಪುವಿನ ಜಾನಪದ ಆಚರಣೆಗಳ ಕುರಿತ ವಿಚಾರಗೋಷ್ಠಿಯಲ್ಲಿ ಹಿರಿಯ ಜಾನಪದ ವಿದ್ವಾಂಸ ಪಿ.ಕೆ.ಸದಾನಂದ ವಿಷಯ ಮಂಡಿಸಿದರು. ಕೃಷ್ಣಕುಮಾರ್ ರಾವ್ ಮಟ್ಟು ಸಂಯೋಜನೆಯಲ್ಲಿ ಸಿರಿಗನ್ನಡ ವಿಶೇಷ ರಸಪ್ರಶ್ನೆ ನಡೆಯಿತು. ಕನ್ನಡ ಭಾಷೆ ಸಂಸ್ಕೃತಿಯ ಬೆಳವಣಿಗೆ ವಿಷಯದಲ್ಲಿ ಪ್ರೊ.ವಿದ್ಯಾ ಅಮ್ಮಣ್ಣಾಯ ಸಂಯೋಜನೆಯಲ್ಲಿ ಸಮ್ಮೇಳನ ಪೂರ್ವ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಿತು.