ಬೈಂದೂರು- ಉಪ್ಪುಂದ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ಪದಾಧಿಕಾರಿಗಳಿಗೆ ಪದ ಪ್ರದಾನಿಸಿದ ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಹೃಷಿಕೇಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಸುಂದರ್ ಕೊಠಾರಿ, ಉದಯ್ ಡಿ.ಆರ್., ಪ್ರತಾಪಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಶೇಖರ ಶೆಟ್ಟಿ ಮೊದಲಾದವರಿದ್ದರು.
ಬೈಂದೂರು: 210 ರಾಷ್ಟ್ರಗಳಲ್ಲಿ ಲಯನ್ಸ್ ಸೇವಾ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ನೂರಾ ಒಂಬತ್ತು ವರ್ಷದ ಹೊಸ್ತಿಲಿನಲ್ಲಿದೆ. ಶೇ.65ರಷ್ಟು ಯುವಜನರನ್ನು ಹೊಂದಿದ ನಮ್ಮ ದೇಶದಲ್ಲಿ ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್‌ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಹೃಷಿಕೇಶ್ ಹೆಗ್ಡೆ ಹೇಳಿದರು.
ಬೈಂದೂರು- ಉಪ್ಪುಂದ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ಪದಾಧಿಕಾರಿಗಳಿಗೆ ಪದ ಪ್ರದಾನಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧ್ಯಕ್ಷ ಸುಂದರ್ ಕೊಠಾರಿ ಅಧ್ಯಕ್ಷತೆ ವಹಿಸಿದ್ದರು. ನಿರ್ಗಮನ ಅಧ್ಯಕ್ಷ ಉದಯ್ ಡಿ.ಆರ್. ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಬವಳಾಡಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಯಿತು. ಕ್ಲಬ್‌ಗೆ ಮೂವರು ಸದಸ್ಯರು ಹೊಸದಾಗಿ ಸೇರ್ಪಡೆಗೊಂಡರು.
ಪ್ರಾಂತ್ಯಾಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ, ಪ್ರಾಂತ್ಯ ಕಾರ್ಯದರ್ಶಿ ದಯಾನಂದ ಶೆಟ್ಟಿ, ನೂತನ ಖಜಾಂಚಿ ಶೇಖರ ಶೆಟ್ಟಿ, ನಿರ್ಗಮನ ಖಜಾಂಚಿ ಎನ್.ಕೆ.ಬಿಲ್ಲವ ಇದ್ದರು. ಗಾಯಾಡಿ ವಿಶ್ವನಾಥ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ರವಿ ಸೋಡಿತಾರ್ ವಂದಿಸಿದರು.