ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್. ಅವರನ್ನು ಸನ್ಮಾನಿಸಲಾಯಿತು.  
ಉಡುಪಿ

ಶಿಕ್ಷಣದ ಮೇಲೆ ಗಮನಹರಿಸಿ ಯಶಸ್ವಿಯಾಗಿ

ಇಂದಿರಾ ಎನ್ ಕೆ
ಕಾರ್ಕಳ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಭಯ ಬಿಟ್ಟು ಪರೀಕ್ಷೆಗೆ ಸಿದ್ಧರಾಗಬೇಕು. ಕರಾವಳಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ನಿರಾಸಕ್ತಿ ಹೆಚ್ಚಿದೆ. ಐಎಎಸ್ ಹಾಗೂ ಐಪಿಎಸ್ ಓದಿನ ಬಗ್ಗೆ ವಿದ್ಯಾರ್ಥಿಗಳು ಮನಸ್ಸು ವಾಡಬೇಕು. ಶಿಕ್ಷಣ ಪಡೆಯುವ ಕಾಲಟ್ಟದಲ್ಲಿ ಶಿಕ್ಷಣದ ಬಗ್ಗೆ ವಾತ್ರ ಗಮನ ಹರಿಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಗಮನ ನೀಡಿದಾಗ ಉನ್ನತ ಹುದ್ದೆ ಏರಲು ಸಾಧ್ಯ ಎಂದು ಕಾರ್ಕಳ ತಹಸೀಲ್ದಾರ್ ಪ್ರದೀಪ್ ಆರ್. ಹೇಳಿದರು.
ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ರೋಟರಿ ವಲಯ ಸಹಾಯಕ ಗವರ್ನರ್ ವ್ನಿೇಶ್ ಶೆಣೈ, ಬೆಳ್ಮಣ್ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಮುರಳಿಧರ್ ಜೋಗಿ, ಬಾಲಚಂದ್ರ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕ ವಿಜಯ್ ಸ್ವಾಗತಿಸಿದರು. ಹೈಸ್ಕೂಲ್ ವಿಭಾಗದ ಮುಖ್ಯಶಿಕ್ಷಕ ಗೋಪಾಲ್ ಹಾಗೂ ಕಾಲೇಜು ವಿಭಾಗದ ಪ್ರಾಂಶುಪಾಲ ವಿನ್ಸೆಂಟ್ ವಿನೋದ್ ಡಿಸೋಜ ವಾರ್ಷಿಕ ವರದಿ ವಾಚಿಸಿದರು. ವಿಲಾಸಿನಿ ನಿರೂಪಿಸಿ, ಹರಿಣಿ ವಂದಿಸಿದರು.