ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ನೂತನ ಧ್ವಜಸ್ತಂಭ ದಾರುವಿಗೆ ತೈಲಾಧಿವಾಸ ಪ್ರಕ್ರಿಯೆ ನಡೆಯಿತು.
ಪಡುಬಿದ್ರಿ: ಪುನಃನಿರ್ಮಾಣಗೊಳ್ಳುತ್ತಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ನೂತನ ಧ್ವಜಸ್ತಂಭ ದಾರುವಿಗೆ ತೈಲಾಧಿವಾಸ ಪ್ರಕ್ರಿಯೆಗೆ ದೇಗುಲ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಭಕ್ತಸಂದೋಹ ಸಮಕ್ಷಮ ನಡೆದಿದ್ದ ಈ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ತಂತ್ರಿಗಳು ಮರಕ್ಕೆ ತೈಲಾಭಿಷೇಕ ನಡೆಸಿದರು. ಭಕ್ತರು ಶುದ್ಧ ಎಳ್ಳೆಣ್ಣೆಯನ್ನು ನೂತನ ಧ್ವಜಸ್ತಂಭ ಮರಕ್ಕೆ ಅರ್ಪಿಸಿದರು.
ದೇಗುಲ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳ, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕ ಪದ್ಮನಾಭ ಭಟ್, ಗುರುರಾಜ ಭಟ್, ವೈ. ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಪಿ.ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ.ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ.ಸುಕುಮಾರ್, ನವೀನ್‌ಚಂದ್ರ ಜೆ.ಶೆಟ್ಟಿ, ಸುಕುಮಾರ್ ಶ್ರೀಯಾನ್, ಅಶೋಕ್ ಸಾಲ್ಯಾನ್, ಭಾಸ್ಕರ್ ಕೆ., ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ನವೀನ್ ಎನ್.ಶೆಟ್ಟಿ, ಬಾಲಕೃಷ್ಣ ಕೊರ್ನಾಯ, ರಮಾಕಾಂತ ರಾವ್, ಪ್ರಕಾಶ್ ದೇವಾಡಿಗ, ಅನಿಲ್‌ಕುಮಾರ್ ಶೆಟ್ಟಿ, ವಿಶುಕುಮಾರ್ ಶೆಟ್ಟಿಬಾಲ್, ದೇಗುಲದ ಸಿಬ್ಬಂದಿ ವರ್ಗ, ಗ್ರಾಮಸ್ಥರು ಮತ್ತಿತರರಿದ್ದರು.