ಉಡುಪಿ: ಮಕ್ಕಳ ದಿನಾಚರಣೆಯಂದು ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಪ್ರತಿಭಾವಂತ ಮಕ್ಕಳಿಗೆ ಕೊಡಮಾಡುವ 13ನೇ ವರ್ಷದ 'ಪ್ರಮಾ ಪ್ರಶಸ್ತಿ-2026'ಕ್ಕೆ ವಿವಿಧ ಕ್ಷೇತ್ರಗಳ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ಶ್ರಾವಣೀ (ಸಂಸ್ಕೃತ), ಗವಿನ್ ರೇಷಿಮೆ (ವಿಜ್ಞಾನ), ಶ್ರೇಯಾ. ಯು. ನಾಯಕ (ವಾದ್ಯ ಸಂಗೀತ), ವಿಶ್ರುತ ಸಾಮಗ (ಚಿತ್ರಕಲೆ), ಸೃಷ್ಟಿ ಆರ್. (ಯಕ್ಷಗಾನ) ಪ್ರಶಸ್ತಿಗೆ ಆಯ್ಕೆಯಾದವರು. ಈ ಬಾರಿಯ ಶ್ರೇಯಸ್ ಪ್ರಶಸ್ತಿಯನ್ನು ಪಾಕ ಶಾಸ್ತ್ರಜ್ಞ ಪ್ರಸನ್ನ ಭಟ್ ಅವರಿಗೆ ನೀಡಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭವು ಮಣಿಪಾಲದಲ್ಲಿರುವ ಮಣಿಪಾಲ್ ಡಾಟ್ ನೆಟ್ನ ಸಭಾಂಗಣದಲ್ಲಿ ನ.14ರಂದು ಸಂಜೆ 4:30ಕ್ಕೆ ನಡೆಯಲಿದೆ ಎಂದು ಟ್ರಸ್ಟ್ನ ಪರವಾಗಿ ವಿದುಷಿ ಪವನಾ ಬಿ. ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.