ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿ ಕಾರು ನಜ್ಜುಗುಜ್ಜಾಗಿರುವುದು. 
ಉಡುಪಿ

ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ, ಐವರಿಗೆ ಗಾಯ

ಉಪ್ಪಿನಂಗಡಿ: ನಿಂತಿದ್ದ ಟಿಪ್ಪರ್‌ಗೆ ಹಿಂದಿನಿಂದ ಕಾರೊಂದು ಡಿಕ್ಕಿಯಾಗಿ ಕಾರಿನಲ್ಲಿದ್ದ 4 ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಮಂಗಳವಾರ ನಡೆದಿದೆ.
ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಫಾರೂಕ್(31), ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ(25), ಜುಲೈಕಾ(52), ಮಹಮ್ಮದ್ ಅಫ್ವಾನ್(15) ಹಾಗೂ ಮಹಮ್ಮದ್ ಇಲ್ಹಾನ್(4) ಗಾಯಗೊಂಡವರು. ಫರಂಗಿಪೇಟೆಯವರಾದ ಇವರು ಕಾರಿನಲ್ಲಿ ಫರಂಗಿಪೇಟೆ ಕಡೆಯಿಂದ ಉಪ್ಪಿನಂಗಡಿ ಕಡೆ ಸಂಚರಿಸುತ್ತಿದ್ದಾಗ ಮೈರಕಟ್ಟೆ ಎಂಬಲ್ಲಿ ಹೆದ್ದಾರಿ ಬದಿ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.