ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಧರಣಿಯಲ್ಲಿ ಎಂ.ಎಲ್.ಅಶ್ವಿನಿ ಮಾತನಾಡಿದರು. ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ.ವತ್ಸರಾಜ್, ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ ಮೊದಲಾದವರಿದ್ದರು. 
ಉಡುಪಿ

ಉಭಯ ರಂಗಗಳಿಂದ ಮೀನುಗಾರರಿಗೆ ವಂಚನೆ

ಕಾಸರಗೋಡು: ರಾಜ್ಯದಲ್ಲಿ ಉಭಯ ರಂಗಗಳು ಕಳೆದ ಹಲವು ದಶಕಗಳಿಂದ ಅದಲುಬದಲಾಗಿ ಆಡಳಿತ ನಡೆಸುತ್ತಾ ಬಂದಿದ್ದರೂ, ಕೇರಳದ ಮೀನುಗಾರರ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳದೆ ಅವರನ್ನು ವಂಚಿಸುತ್ತಾ ಬಂದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿದರು.
ಒಬಿಸಿ ಮೋರ್ಚಾ ಜಿಲ್ಲಾ ಸಮಿತಿ ಕಾಸರಗೋಡು ಮೀನುಗಾರಿಕಾ ಕಚೇರಿ ಎದುರು ಆಯೋಜಿಸಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಎಡರಂಗ ಅಥವಾ ಐಕ್ಯರಂಗ ಆಡಳಿತ ನಡೆಸಿದರೂ, ಕೇರಳದ ಮೀನುಗಾರರಿಗೆ ಟ್ರೋಲಿಂಗ್ ನಿಷೇಧ ಕಾಲಾವಧಿಯಲ್ಲಿ ಪೆನ್ಶನ್ ಹಾಗೂ ರೇಷನ್ ವಿಳಂಬವಾಗುತ್ತಿರುವುದು ಸಾಮಾನ್ಯವಾಗಿದೆ. ಮೀನುಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಉಭಯ ರಂಗಗಳು, ಅವರ ಜೀವನಮಟ್ಟ ಸುಧಾರಿಸುವ ಯಾವುದೇ ಮಹತ್ವದ ಯೋಜನೆ ಜಾರಿಗೆ ತರುತ್ತಿಲ್ಲ. ಜಿಲ್ಲೆಯ ನಾನಾ ಕಡೆ ಸಮುದ್ರ ಕೊರೆತದಿಂದ ಅನುಭವಿಸುತ್ತಿರುವ ಸಂಕಷ್ಟದ ಬದುಕಿನ ಬಗ್ಗೆಯೂ ಚಕಾರವೆತ್ತುತ್ತಿಲ್ಲ ಎಂದರು.
ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಕೆ.ಪಿ.ವತ್ಸರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಗೀಶ್ ಪೂರಾಡನ್, ಕೆ.ಶೈಬು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಟಿ.ವಿ.ಮುರಳಿ ಕುಮಾರ್, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್.ರಮಣಿ, ಒಬಿಸಿ ಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ಅಶೋಕ್ ಚೆಟ್ಟಿಯಾರ್ ಉಪಸ್ಥಿತರಿದ್ದರು.