drowned 
ಉಡುಪಿ

ಕೆರೆಗೆ ಬಿದ್ದು ಮೀನುಗಾರ ಸಾವು

ಕುಂದಾಪುರ: ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿ ಗುರುವಾರ ಬೆಳಗ್ಗೆ ಮೀನು ಹಿಡಿಯಲು ಕೆರೆಯಲ್ಲಿ ಬಲೆ ಹಾಕುತ್ತಿದ್ದ ವೇಳೆ ಕೆರೆಗೆ ಬಿದ್ದು ಆನಗಳ್ಳಿ ಗ್ರಾಮದ ಗಾಣಿಗರಬೆಟ್ಟು ನಿವಾಸಿ ಉದಯ(30) ಎಂಬುವರು ಮೃತಪಟ್ಟಿದ್ದಾರೆ.

ಬೆಳಗ್ಗೆ ಮನೆಯಿಂದ ಬಲೆ ತೆಗೆದುಕೊಂಡು ಮೀನು ಹಿಡಿಯಲು ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಆನಗಳ್ಳಿ ಗ್ರಾಮದ ಆಗರಕಟ್ಟು ಎಂಬಲ್ಲಿ ಮಂಜು ಬಿಲ್ಲವ ಎಂಬುವರಿಗೆ ಸೇರಿದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.