ಮುಳ್ಳಿಕಟ್ಟೆ ಜಂಕ್ಷನ್ ಮೀನು ವ್ಯಾಪಾರ ಕಟ್ಟಡದ ದುಸ್ಥಿತಿ. 
ಉಡುಪಿ

ಮೀನು ಮಾರುಕಟ್ಟೆ ಅವ್ಯವಸ್ಥೆ ಆಗರ

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಹೊಸಾಡು ಗ್ರಾಪಂ ಕಾರ್ಯಾಲಯದ ಸಮೀಪದಲ್ಲೇ ಇರುವ ಮುಳ್ಳಿಕಟ್ಟೆ ಮೀನು ವಾರುಕಟ್ಟೆ ಕೇಂದ್ರ ಅವ್ಯವಸ್ಥೆ ಆಗರವಾಗಿದ್ದು, ಮಳೆ, ಗಾಳಿ ಹಾಗೂ ಬಿಸಿಲಿನ ನಡುವೆ ನಿತ್ಯವೂ ಇಲ್ಲಿನ ಮಹಿಳೆಯರು ಜೋಪಡಿಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿರುವ ಇವರ ಸಮಸ್ಯೆ ಸ್ಥಳೀಯಾಡಳಿತದ ಗಮನಕ್ಕೆ ಬಂದರೂ ಪರಿಹಾರ ವಾತ್ರ ದೊರಕಿಲ್ಲ.
ಮುಳ್ಳಿಕಟ್ಟೆ ಜಂಕ್ಷನ್‌ನ ಗಂಗೊಳ್ಳಿ ಸಂಪರ್ಕ ರಸ್ತೆಯಲ್ಲಿರುವ ಈ ಮೀನು ವ್ಯಾಪಾರ ಕೇಂದ್ರದಲ್ಲಿ ನಿತ್ಯವೂ ಮಹಿಳೆಯರು ವ್ಯಾಪಾರ ನಡೆಸುತ್ತಿದ್ದಾರೆ. ಮೀನು ವ್ಯಾಪಾರ ನಡೆಯುವ ಕಟ್ಟಡದಲ್ಲಿ ಕಳೆದ ಮೂರು ತಿಂಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಈ ಕುರಿತು ಪಂಚಾಯಿತಿಗೆ ವಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಒಂದು ವೇಳೆ ಮೀನು ವ್ಯಾಪಾರವಾಗದೆ ಉಳಿದರೆ ಅದನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆಗಳಿಲ್ಲ. ಹೀಗಾಗಿ ಪ್ರತಿದಿನ ಉಳಿದ ಮೀನುಗಳನ್ನು ಮನೆಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಎದುರಾಗಿದೆ.

ಬಳಕೆಗೆ ಬಾರದ ಹೊಂಡ

ಮೀನು ವ್ಯಾಪಾರ ಕೇಂದ್ರದ ಪಕ್ಕದಲ್ಲೇ ನಿರ್ಮಿಸಿರುವ ಹೊಂಡ ಈಗ ಪ್ರಯೋಜನಕ್ಕೆ ಬಾರದಂತಾಗಿದೆ. ಎತ್ತರದ ಪ್ರದೇಶದಲ್ಲಿ ನಿರ್ಮಿಸಿರುವುದರಿಂದ ಮೀನು ತೊಳೆದ ನೀರು ಸರಿಯಾಗಿ ಹರಿದು ಹೋಗದೆ, ಕಟ್ಟಡದ ಹಿಂಭಾಗದಲ್ಲಿರುವ ತೋಡಿಗೆ ಸೇರುತ್ತಿದೆ. ಇದರಿಂದ ಪರಿಸರದಲ್ಲಿ ದುರ್ವಾಸನೆ ಹರಡುತ್ತಿದೆ. ಸೂಕ್ತ ರೀತಿಯಲ್ಲಿ ಹೊಂಡ ನಿರ್ಮಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬುದು ವ್ಯಾಪಾರಿಗಳ ವಾತು.

ಮಳೆಗಾಲದಲ್ಲಿ ಜೋಪಡಿ ಸ್ಥಿತಿ

ವಿದ್ಯುತ್ ಸಮಸ್ಯೆ ಜತೆ ಮಳೆಗಾಲದಲ್ಲಿ ಜೋಪಡಿ ಸ್ಥಿತಿಯೂ ಆತಂಕ ತರಿಸಿದೆ. ಗಾಳಿ ಮಳೆಗೆ ತಗಡಿನ ಶೀಟ್‌ಗಳು ಹಾರಿ ಹೋಗುವ ಭೀತಿ ಇದೆ. ಈಗಾಗಲೇ ಶೀಟ್‌ಗಳು ಹಾಗೂ ಅವುಗಳಿಗೆ ಆಸರೆಯಾಗಿರುವ ಕಂಬಗಳು ತುಕ್ಕು ಹಿಡಿದಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಪ್ರತಿ ನಿತ್ಯ ದುಡಿಯುವ ಮಹಿಳೆಯರಿಗೆ ಕನಿಷ್ಠ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು.

ಮಳ್ಳಿಕಟ್ಟೆ ಜಂಕ್ಷನ್ ಮೀನು ವಾರುಕಟ್ಟೆ ಸಮಸ್ಯೆ ಈಗಾಗಲೇ ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಮಳೆ ನೀರಿನಿಂದ ಸೋರುತ್ತಿರುವ ವಾಡನ್ನು ತುರ್ತಾಗಿ ದುರಸ್ತಿಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ಆಧರಿಸಿ ಇತರ ಅಭಿವೃದ್ಧಿ ಕಾರ್ಯಗಳನ್ನು ವಾಡಲಾಗುವುದು.

— ಶೋಭಾ ಎಸ್. ಹೊಸಾಡು ಪಿಡಿಒ

ಮೂಲಸೌಲಭ್ಯ ಕೊರತೆಯಿಂದ ನಿತ್ಯ ಸಂಕಷ್ಟದಲ್ಲೇ ವ್ಯಾಪಾರ ವಾಡುತ್ತಿದ್ದೇವೆ. ಅಗತ್ಯವಾಗಿ ಶೌಚಗೃಹ ಕೊರತೆಯಿಂದ ಗ್ರಾಹಕರು, ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತ ಗಮನಹರಿಸಲಿ.

— ಪದ್ಮಾವತಿ, ಮೀನು ವ್ಯಾಪಾರಿ