ಜೆನಿತ ಡೈ ಮೇಕರ್ ಇಂಡಸ್ಟ್ರೀಸ್ ಬಳಿ ಬೆಂಕಿ
ಬ್ರಹ್ಮಾವರ: ಮಟಪಾಡಿ ಸಮೀಪದ ನೀಲಾವರ ಸಂಪರ್ಕ ಕಲ್ಪಿಸುವ ಜೆನಿತ ಡೈ ಮೇಕರ್ ಇಂಡಸ್ಟ್ರೀಸ್ ಬಳಿ ಬೆಂಕಿ ಹೊತ್ತಿಕೊಂಡಿದ್ದು ಕೂಡಲೇ ಸ್ಥಳಿಯರು ಮತ್ತು ಅಗ್ನಿಶಾಮಕದಳ ಸೇರಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಬ್ರಹ್ಮಾವರದ ಅನೇಕ ಕಡೆ ಆಗಾಗ ನಡೆಯುವ ಬೆಂಕಿ ದುರಂತಗಳಿಗೆ ದೂರದ ಉಡುಪಿ ಅಥವಾ ಕುಂದಾಪುರದಿಂದ ಅಗ್ನಿಶಾಮಕ ಬರುವಾಗ ಹೆಚ್ಚಿನ ಅವಘಢ ಸಂಭವಿಸುವ ಕಾರಣ ಬ್ರಹ್ಮಾವರ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.