ಉಡುಪಿಯ ಪೆರಂಪಳ್ಳಿ ಬಳಿ ಖಾಲಿ ಜಾಗದಲ್ಲಿ ಆವರಿಸಿದ್ದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ.
* ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ
ಉಡುಪಿ: ಪ್ರತ್ಯೇಕ ಎರಡು ಕಡೆಗಳಲ್ಲಿ ಶುಕ್ರವಾರ (ಫೆ.27) ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಉಡುಪಿಯ ಪೆರಂಪಳ್ಳಿ ಚರ್ಚ್ ಸಮೀಪದ ರೈಲ್ವೆ ಬ್ರಿಡ್ಜ್ ಬಳಿ ಇರುವ ಖಾಲಿ ಜಾಗದಲ್ಲಿ ಸುಮಾರು ಅರ್ಧ ಎಕರೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬಿಸಿಲಿನ ಪ್ರಖರತೆಯಿಂದಾಗಿ ಹುಲ್ಲು ಹಾಗೂ ಸಣ್ಣ ಗಿಡಗಳಳು ಒಣಗಿದ್ದು, ಬೆಂಕಿ ವ್ಯಾಪಕವಾಗಿ ಆವರಿಸತೊಡಗಿತ್ತು. ಈ ಸ್ಥಳದಲ್ಲಿ ಯಾರೋ ಬೀಡಿ ಅಥವಾ ಸಿಗರೇಟ್ ಸೇದಿ ಎಸೆದಿದ್ದರಿಂದ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಉಡುಪಿಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು.
ಮಲ್ಪೆಯಲ್ಲಿ
ಮಲ್ಪೆ ಸಮೀಪದಲ್ಲಿರುವ ಹೋಮ್ ಸ್ಟೇ ಒಂದರಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಒಳಾಂಗಣದಲ್ಲಿ ಭಾರಿ ಹಾನಿಯಾಗಿದೆ. ಯಾವುದೇ ಜೀವಾಪಾಯ ಉಂಟಾಗಿಲ್ಲ. ಎಸಿ ಸ್ಫೋಟಗೊಂಡ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿಯಿದೆ. ಮಲ್ಪೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು. ಆದರೆ, ಕಾರ್ಯಾಚರಣೆಗೂ ಮೊದಲೇ ಹೋಮ್ ಸ್ಟೇ ಒಳಗಿನ ಎಲ್ಲ ವಿದ್ಯುತ್ ಪರಿಕರಗಳು ಬೆಂಕಿಗೆ ಆಹುತಿಯಾಗಿದ್ದವು.