ಕಡಬ ಪಟ್ಟಣ ಪಂಚಾಯಿತಿ ಸಿಬ್ಬಂದಿ ಆಡನ್ನು ವಶಕ್ಕೆ ಪಡೆದಿರುವುದು.
ಕಡಬ: ಮುಖ್ಯ ಪೇಟೆಯಲ್ಲಿ ರಸ್ತೆಗೆ ಸಾಕುಪ್ರಾಣಿಗಳನ್ನು ಬಿಡುವವರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸಾರ್ವಜನಿಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ, ರಸ್ತೆಯಲ್ಲಿ ತಿರುಗಾಡುತ್ತಿದ್ದ ಆಡೊಂದನ್ನು ವಶಕ್ಕೆ ಪಡೆದು, ಮಾಲೀಕರಿಗೆ ದಂಡ ವಿಧಿಸಲಾಗಿದೆ.
ವಶಕ್ಕೆ ಪಡೆದ ಆಡನ್ನು ಪಪಂ ಆರಣದಲ್ಲಿ ಇರಿಸಲಾಗಿತು. ಅದರ ವಾಲೀಕರಿಂದ ದಂಡ ಕಟ್ಟಿಸಿಕೊಂಡು ಆಡನ್ನು ಕಳುಹಿಸಲಾಯಿತು. ಆಡಿನ ಕಾಲಿನಲ್ಲಿ ಗಾಯವಾಗಿರುವುದನ್ನು ಕಂಡ ವಾಲೀಕ ಪಂಚಾಯಿತಿ ವಠಾರದಲ್ಲಿದ್ದ ನಾಯಿಗಳು ಕಚ್ಚಿವೆ ಎಂದು ತಗಾದೆ ತೆಗಿದಿದ್ದಾರೆ. ಪಪಂ ಆವರಣದಲ್ಲಿ ಅಂತಹ ಟನೆ ನಡೆದಿಲ್ಲ. ಮುಳ್ಳು ಚುಚ್ಚಿದ ಗಾಯದಂತಿದೆ. ಸಾರ್ವಜನಿಕರಿಗೆ ಪಪಂ ವಿರುದ್ಧ ತಪ್ಪುಸಂದೇಶ ರವಾನೆಯಾಗಬಾರದು ಎಂಬ ನಿಟ್ಟಿನಲ್ಲಿ ಪಶುವೈದ್ಯರಿಂದ ಪರೀಕ್ಷೆ ನಡೆಸಿ ಅವರು ವರದಿ ನೀಡಿದ ಬಳಿಕ ಆಡನ್ನು ಮಾಲೀಕರ ಸ್ವಾಧೀನಕ್ಕೆ ನೀಡಲಾಗುವುದು ಎಂದು ಪಪಂ ಅಧ್ಯಕ್ಷೆ ತಮ್ಮನ್ನಾ ಜಬೀನ್ ತಿಳಿಸಿದ್ದಾರೆ. ಪೇಟೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಸಾಕುಪ್ರಾಣಿಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ದಂಡ ವಿಧಿಸುವ ಕಾರ್ಯ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಸಾಮಾನ್ಯ ಸಭೆಯಲ್ಲಿ ನಿರ್ಣಯ: ಕಡಬ ಪೇಟೆಯಲ್ಲಿ ದನ, ಆಡು ಸೇರಿದಂತೆ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಿರಂತರ ತೊಂದರೆಯಾಗುತ್ತಿದ್ದರೂ ಪಪಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪಪಂ ಸಾವಾನ್ಯ ಸಭೆಯಲ್ಲಿ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುವ ವಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಅಧಿಕೃತ ನಿರ್ಣಯ ಕೈಗೊಳ್ಳಲಾಗಿತ್ತು.