ಜಾಲಾಡಿ-ಹೊಸ್ಕಳಿ ಭಾಗದ ಮುಳುಗಡೆಯಾದ ಗದ್ದೆಗಳನ್ನು ಉಡುಪಿ ಜಿಲ್ಲಾಧಿಕಾರಿ ಪರಿಶೀಲಿಸಿದರು. ಪ್ರಮುಖರಾದ ಪ್ರದೀಪ್ ಕುರ್ಡೇಕರ್, ರಾವೇಂದ್ರ ದೇವಾಡಿಗ, ಸೋಮಪ್ಪ ಮೊದಲಾದವರಿದ್ದರು.
ಕುಂದಾಪುರ: ಜಾಲಾಡಿ- ಹೊಸ್ಕಳಿ ಭಾಗದ ಗದ್ದೆಗಳು ಮುಳುಗಡೆಯಾಗಿ ನಾಟಿ ಕಾರ್ಯಕ್ಕೆ ತೊಂದರೆ ಆಗಿರುವುದನ್ನು ತಿಳಿದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು.
ಈಗ ಬೇಸಾಯವೇ ಮಾಡದಂತಾಗಿದೆ. ಆದಷ್ಟು ಬೇಗ ಮಳೆ ನೀರು ಹರಿದು ಹೋಗಲು ಮೋರಿ ಹಾಕಿ ಕೊಡುವ ಕಾರ್ಯ ಆಗಬೇಕು. ಅದನ್ನ ತಹಸೀಲ್ದಾರ್ ಮುಂದಾಳತ್ವದಲ್ಲಿಯೇ ಮಾಡಲಿ ಎನ್ನುವುದಾಗಿ ಅಲ್ಲಿ ಸೇರಿದ್ದ ರೈತರು ಒತ್ತಾಯಿಸಿದರು.
ಈಗ ಏನೇ ಮಾಡಿದರೂ, ಇನ್ನು ಈ ಸಲ ಬೇಸಾಯ ಮಾಡುವುದು ಕಷ್ಟ. ವಾಡಿದರೂ ನೆರೆ ನೀರಲ್ಲಿ ಮುಳುಗಡೆಯಾಗಲಿದೆ. ಹಾಗಾದರೆ ರೈತರು ಏನು ವಾಡಬೇಕು? ರೈತರಿಗೆ ನಷ್ಟ ಪರಿಹಾರಕ್ಕೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಿ ಎನ್ನುವುದಾಗಿ ಇಲ್ಲಿನ ರೈತರು ಆಗ್ರಹಿಸಿದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಆಡಳಿತಾಧಿಕಾರಿ ಸೋಮಪ್ಪ, ಕಟ್‌ಬೆಲ್ತೂರು ಪಿಡಿಒ ಕುಶಲ ಶೆಟ್ಟಿ, ರೈತ ಮುಖಂಡ ಶರತ್ ಕುವಾರ್ ಶೆಟ್ಟಿ, ತ್ರಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಿಥುನ್ ದೇವಾಡಿಗ, ಗ್ರಾ.ಪಂ. ಮಾಜಿ ಸದಸ್ಯ ಸಚ್ಚಿಂದ್ರ ದೇವಾಡಿಗ, ರೈತರಾದ ಜಗನ್ನಾಥ ದೇವಾಡಿಗ, ತೇಜ ದೇವಾಡಿಗ, ದಿನಕರ ದೇವಾಡಿಗ ಮೊದಲಾದವರಿದ್ದರು.
ಜಾಲಾಡಿ-ಹೊಸ್ಕಳಿಯಲ್ಲಿ ಗದ್ದೆಗಳಲ್ಲಿ ನೀರು ನಿಂತಿರುವುದನ್ನು ಸ್ವತಃ ಪರಿಶೀಲಿಸಿದ್ದು, ನೀರು ಕೆಳಗೆ ಹರಿದು ಹೋಗಲು ಮೋರಿ ಅಳವಡಿಸಿ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಅದಕ್ಕೆ ಸ್ಥಳೀಯಾಡಳಿತ ಎಲ್ಲ ರೀತಿಯಿಂದಲೂ ಸಹಕಾರ ನೀಡಲಿದೆ. ರೈತರ ಬೇಸಾಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಸಂಬಂಧ ಪ್ರಾಕೃತಿಕ ವಿಕೋಪದಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದನ್ನು ತಹಸೀಲ್ದಾರ್ ಫಾಲೋಅಪ್ ವಾಡುತ್ತಾರೆ.
— ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ