ವಂಡ್ಸೆ ನಿರಾಮಯ ಸೊಸೈಟಿ ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಡಾ.ನಾಗಭೂಷಣ ಉಡುಪ, ಡಾ.ಅತುಲ್ ಕುಮಾರ್ ಶೆಟ್ಟಿ, ಡಾ.ಪ್ರಶಾಂತ್ ಭಟ್, ಡಾ.ಲತಾ ನಾಯಕ್ ಮತ್ತಿತರರಿದ್ದರು.
- ವಂಡ್ಸೆ ನಿರಾಮಯ ಸೊಸೈಟಿ ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆ
- ಗುಣಮಟ್ಟದ ಆರೋಗ್ಯ ಸೇವೆ ಚರ್ಚೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ವಂಡ್ಸೆ ನಿರಾಮಯ ಸೊಸೈಟಿಯ ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆ ಸೊಸೈಟಿ ಕಚೇರಿಯಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಉಪಸ್ಥಿತಿ ಹಾಗೂ ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿತು.
ಸೊಸೈಟಿ ವತಿಯಿಂದ ವಿವಿಧ ರೀತಿಯ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಬಗ್ಗೆ ಹಾಗೂ ಸಂಪನ್ಮೂಲ ಕ್ರೋಡಿಕರಣದ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿ ಗೌರವ ಸದಸ್ಯರಾದ ಡಾ.ನಾಗಭೂಷಣ ಉಡುಪ, ಡಾ.ಅತುಲ್ ಕುಮಾರ್ ಶೆಟ್ಟಿ, ಪ್ರಮುಖರಾದ ಡಾ.ಪ್ರಶಾಂತ್ ಭಟ್, ಡಾ.ಲತಾ ನಾಯಕ್, ಡಾ.ಅಂಜಲಿ ರಾಜ್, ಡಾ.ಪ್ರೇಮಾನಂದ್, ದೀಪಾ, ರಮೇಶ್ ಕುಲಾಲ್, ನಾರಾಯಣ ಶೆಟ್ಟಿ, ಸುದರ್ಶನ ಶೆಟ್ಟಿ, ಆಶಾ ಆಚಾರ್ಯ, ರವೀಂದ್ರ ಶೆಟ್ಟಿ, ರಾಜೇಶ್ ದೇವಾಡಿಗ, ಜ್ಯೋತಿ, ಗೋವರ್ಧನ್ ಜೋಗಿ, ಸುಭಾಷ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಭಾವನಾ, ರೂಪಾ ಗೋಪಿ, ಗಣೇಶ ಹೆಬ್ಬಾರ್, ಚಂದ್ರ ಬಿಲ್ಲವ, ಸುಶೀಲಾ, ಜಯ, ಸುರೇಶ್, ಮಿಥುನ್ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.