ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕೃಷಿಕರ ದಿನಾಚರಣೆಯಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ, ಗ್ರಾಪಂ ಅಧ್ಯಕ್ಷ ಶಂಕರ ಡಿ., ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮೊದಲಾದವರು ಇದ್ದರು.  
ಉಡುಪಿ

ರೈತರನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯ, ಕೀಟಬಾಧೆ

ಬದಿಯಡ್ಕ: ಆಧುನಿಕ ಯುಗದಲ್ಲಿ ಕೃಷಿಕರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ, ಕೀಟಬಾಧೆ, ಕಾರ್ಮಿಕರ ಅಭಾವ ಮತ್ತು ಸೂಕ್ತ ಮಾರುಕಟ್ಟೆ ಬೆಲೆಯ ಕೊರತೆ ರೈತರನ್ನು ಕಾಡುತ್ತಿದೆ. ಯುವಕರು ಕೃಷಿಯತ್ತ ಆಕರ್ಷಿತರಾಗಬೇಕು ಎಂದು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಹೇಳಿದರು.

ಬದಿಯಡ್ಕ ಗ್ರಾಮ ಪಂಚಾಯಿತಿ ಕೃಷಿಭವನದ ನೇತೃತ್ವದಲ್ಲಿ ಸೋಮವಾರ ಕೃಷಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕೃಷಿ ಅಧಿಕಾರಿ ಬಿಂದು ಜೋರ್ಜ್ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಮೋಹನನ್ ಸಿ. ವಂದಿಸಿದರು.

ಸನ್ಮಾನ

ಸಾಧಕ ಕೃಷಿಕರಾದ ರಘುನಾಥ ರೈ ಮೇಗಿನಕಡಾರು, ವಾಮನ ನಾಯ್ಕ ಏಳ್ಕಾನ, ಕೃಷ್ಣಪ್ರಸಾದ ಅಮ್ಮಂಗಲ್ಲು, ಚಂದ್ರ ಜಿ.ಗೋಳಿಯಡ್ಕ, ಮೀನಾಕ್ಷಿ ಪುರಂದರ ರೈ ವಳಮಲೆ, ವಿನೋದ್ ಮೇಗಿನಡ್ಕ, ರವಿಶಂಕರ ಕೆ.ಕೊಲ್ಲಂಪಾರೆ, ಮಶೂದ್ ಏವಿಂಜೆ ಅವರನ್ನು ಸನ್ಮಾನಿಸಲಾಯಿತು.