ತನು ಯೋಗ ಭೂಮಿ ಕಾರ್ಯಕ್ರಮದ ಮೂಲಕ ದಾಖಲೆ ಮಾಡಿರುವ ತನುಶ್ರೀ ಪಿತ್ರೋಡಿ ಅವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನ ಪ್ರಮಾಣ ಪತ್ರವನ್ನು ಹರೀಶ್ ಆರ್. ವಿತರಿಸಿದರು. ಪ್ರೀತಿ ಕ್ರಾಸ್ತಾ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಉದಯಕುಮಾರ್ ಪಿತ್ರೋಡಿ, ಸಂಧ್ಯಾ ಪಿತ್ರೋಡಿ, ರಾಜೇಂದ್ರ ಚಕ್ಕೇರಾ, ಮಂಜುಶ್ರೀ ಪೂಜಾರಿ, ಶ್ರೀನಿವಾಸ್ ಭಟ್ ಇತರರಿದ್ದರು.
* 'ತನು ಯೋಗ ಭೂಮಿ' ಕಾರ್ಯಕ್ರಮದ ಮೂಲಕ ಹೊಸ ದಾಖಲೆ
ಉಡುಪಿ: ದಶ ವಿಶ್ವದಾಖಲೆಗಳ ಸರದಾರಿಣಿ, ಉಡುಪಿಯ ಯೋಗಬಾಲೆ ತನುಶ್ರೀ ಪಿತ್ರೋಡಿ ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದು, ಅದರ ಪ್ರಮಾಣಪತ್ರ ಸ್ವೀಕಾರ ಸಮಾರಂಭ ಉಡುಪಿಯ ಪುರಭವನದಲ್ಲಿ ಸೋಮವಾರ (ಜ.26) ಸಂಜೆ ನೆರವೇರಿತು.
ಯೋಗಾಸನ ಮತ್ತು ದೇಶಭಕ್ತಿ ಸಾರುವ 'ತನು ಯೋಗ ಭೂಮಿ' ಕಾರ್ಯಕ್ರಮವನ್ನು ತನುಶ್ರೀ ಪಿತ್ರೋಡಿ, ರಾಜ್ಯದ ಸುಮಾರು 155 ಶಾಲೆಗಳಲ್ಲಿ ಪ್ರದರ್ಶಿಸಿದ್ದಾರೆ. ಈವರೆಗೆ 5,2051 ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ರಮವು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿತ್ತು. ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನ ತೀರ್ಪುಗಾರ ಹರೀಶ್ ಆರ್. ಪ್ರಮಾಣ ಪತ್ರ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ 'ತನು ಯೋಗ ಭೂಮಿ' ನಿರ್ದೇಶಕ ನಾಗರಾಜ್ ವರ್ಕಾಡಿ, ಯೋಗ ಸಾಧಕ ರಾಜೇಂದ್ರ ಚಕ್ಕೇರಾ, ಮಂಜುಶ್ರೀ ಅನೂಪ್ ಪೂಜಾರಿ, ಮಾಜಿ ಯೋಧ ಶ್ರೀನಿವಾಸ್ ಭಟ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ತನು ಯೋಗ ಭೂಮಿಗೆ ಸಹಕರಿಸಿದ ಅನೇಕರನ್ನು ಗೌರವಿಸಲಾಯಿತು.
ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಇಂದ್ರಾಳಿ ಜಯಕರ್ ಶೆಟ್ಟಿ, ಹರೀಶ್ ಆರ್., ಪುರುಷೋತ್ತಮ್ ಶೆಟ್ಟಿ, ತಲ್ಲೂರು ಶಿವರಾಂ ಶೆಟ್ಟಿ, ಗೀತಾಂಜಲಿ ಸುವರ್ಣ, ರಾಮಕೃಷ್ಣ ಕೊಡಂಚ, ಉಮೇಶ್, ಸೈಂಟ್ ಸಿಸಿಲೀಸ್ನ ಸಿಸ್ಟರ್ ಪ್ರೀತಿ ಕ್ರಾಸ್ತಾ, ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಉದಯಕುಮಾರ್ ಪಿತ್ರೋಡಿ, ಸಂಧ್ಯಾ ಪಿತ್ರೋಡಿ ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ 'ತನು ಯೋಗ ಭೂಮಿ' ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಹುತಾತ್ಮಯೋಧ ಅನೂಪ್ ಪೂಜಾರಿ ಅವರಿಗೆ ಸಮರ್ಪಿಸಲಾಯಿತು.