ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ. 
ಉಡುಪಿ

'ಯಕ್ಷ ವಿದ್ಯಾಮಾನ್ಯ' ಪ್ರಶಸ್ತಿಗೆ ರಘುರಾಮ ಹೊಳ್ಳ ಆಯ್ಕೆ

* ಏ.2ರಂದು ಪುರಸ್ಕಾರ ಪ್ರದಾನ

ಉಡುಪಿ: ಯತಿಶ್ರೇಷ್ಠ  ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಸ್ಮರಣಾರ್ಥ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ಕೊಡ ಮಾಡುವ 'ಯಕ್ಷ ವಿದ್ಯಾಮಾನ್ಯ' ಪ್ರಶಸ್ತಿಗೆ ಧರ್ಮಸ್ಥಳ ಮೇಳದಲ್ಲಿ 34 ವರ್ಷ, ಕದ್ರಿ ಮೇಳದಲ್ಲಿ 6 ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದಾರೆ.
ಪ್ರಸಿದ್ಧ ಭಾಗವತರಾಗಿದ್ದ ಇವರ ತಂದೆ ಪುತ್ತಿಗೆ ರಾಮಕೃಷ್ಣ ಜೋಯಿಸರೇ ಆರಂಭಿಕ ಗುರುಗಳು. ಕಡತೋಕಾ ಮಂಜುನಾಥ ಭಾಗವತರಿಂದ ಪ್ರೇರಣೆಗೊಂಡು ತಮ್ಮ ವಿಶೇಷ ಕಂಠಸಿರಿಯಿಂದ ಕಲಾರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಂಡೆ, ಮದ್ದಲೆ ವಾದನಗಳಲ್ಲೂ ಪರಿಣತರಾಗಿದ್ದಾರೆ.
ಏ.2ರಂದು ಬೆಳಗ್ಗೆ 10:30ಕ್ಕೆ ಪಲಿಮಾರಿನಲ್ಲಿ ನಡೆಯಲಿರುವ ಹನುಮಜ್ಜಯಂತಿ ಮಹೋತ್ಸವದಲ್ಲಿ ಫಲಕ ಮತ್ತು 50 ಸಾವಿರ ರೂ. ನಿಧಿಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.