ಪುರುಷೋತ್ತಮ್: 
ಉಡುಪಿ

ಬಾವಿಗೆ ಬಿದ್ದು ಮೃತ್ಯು

ಇಂದಿರಾ ಎನ್ ಕೆ

ಕಾಸರಗೋಡು: ನೀರು ಸೇದುವ ವೇಳೆ ಆಯತಪ್ಪಿ ಬಾವಿಗೆ ಬಿದ್ದು ಪೆರಿಯಾ ವಡಕ್ಕೇಕರಿಯ ನಡುವಿಲ್ ವೀಡ್ ನಿವಾಸಿ, ಬಿಜೆಪಿ ಪೆರಿಯಾ ವಲಯ ಸಮಿತಿ ಅಧ್ಯಕ್ಷ ಪುರುಷೋತ್ತಮನ್ (64) ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಮನೆ ಸಮೀಪದ ತರವಾಡು ಮನೆಗೆ ನೀರು ಸೇದುವುದಕ್ಕಾಗಿ ತೆರಳಿದ್ದು, ಒಂದು ಬಕೆಟ್ ನೀರು ತಂದು ವಾಪಸ್ ನೀರು ತರಲು ಹೋದವರು ಹಿಂತಿರುಗಿ ಬಂದಿರಲಿಲ್ಲ. ಹುಡುಕಾಡಿದಾಗ, ಹಗ್ಗ ಹಾಗೂ ಬಕೆಟ್ ಬಾವಿಯೊಳಗೆ ಇಳಿಸಿರುವುದು ಕಂಡುಬಂದಿದೆ. ಸಂಶಯಗೊಂಡು ಅಗ್ನಿಶಾಮಕಕ್ಕೆ ಮಾಹಿತಿ ನೀಡಿ ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ.