ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬೈಕ್ 
ಉಡುಪಿ

ನಕಲಿ ನಂಬರ್‌ಪ್ಲೇಟ್ ಜಾಲ ಪತ್ತೆ

ಬೆಳ್ತಂಗಡಿ: ದಾಖಲೆಗಳಿಲ್ಲದಿರುವ ಬೈಕ್‌ನ್ನು ಪಶ್ಚಿಮ ಬಂಗಾಳದಿಂದ ಖರೀದಿಸಿ ಬಳಿಕ ನಕಲಿ ನಂಬರ್‌ಪ್ಲೇಟ್ ಅಳವಡಿಸಿ ಚಲಾಯಿಸುತ್ತಿದ್ದ ಆರೋಪಿಯನ್ನು ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, ಹೆಚ್ಚಿನ ವಿಚಾರಣೆಗೆ ಬೆಳ್ತಂಗಡಿ ಠಾಣೆಗೆ ಪ್ರಕರಣ ಹಸ್ತಾಂತರಿಸಿದ್ದರಾಎ.
ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ನವಾಜ್ (19) ಎಂಬಾತ ಗುರುವಾರ ಸಂತೆಕಟ್ಟೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಬೆಳ್ತಂಗಡಿ ಸಂಚಾರಿ ಸಬ್‌ಇನ್‌ಸ್ಪೆಕ್ಟರ್ ಕಿಶೋರ್ ಕುಮಾರ್ ಪಿ. ಮತ್ತು ಸಿಬ್ಬಂದಿ ಶಿವಾನಂದ ತಡೆದು ನಿಲ್ಲಿಸಿ ಪರಿಶೀಲಸಿದಾಗ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಬೈಕ್‌ನ ಫಿಟ್ನೆಸ್ ಪ್ರಮಾಣಪತ್ರದ ಅವಧಿ ಮುಗಿದಿರುವ ಕಾರಣ ನಕಲಿ ನಂಬರ್‌ಪ್ಲೇಟ್ ಅಳವಡಿಸಿರುವುದಾಗಿ ಆರೋಪಿ ತಿಳಿಸಿದ್ದು, ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತು ನೋಡಿ ಆನ್‌ಲೈನ್ ಮೂಲಕ ಹಣ ಪಾವತಿಸಿ ವಾಹನ ನೋಂದಣಿ ಹಾಗೂ ದಾಖಲೆಗಳನ್ನು ಪಡೆದಿದ್ದಾಗಿ ಹೇಳಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.