ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಉದಯ ಶೆಟ್ಟಿ ಮುನಿಯಾಲು ಉದ್ಘಾಟಿಸಿದರು. 
ಉಡುಪಿ

ಸಮಾಜಮುಖಿ ಕಾರ್ಯಕ್ಕೆ ಬೇಕು ಎಲ್ಲರ ಸಹಕಾರ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಉಡುಪಿಯ ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕುಕ್ಕುಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ನಡೆಯಿತು.
ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಮತ್ತು ಬದ್ಧತೆ ಅತ್ಯಗತ್ಯವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆ ಈ ಮೂರು ಕ್ಷೇತ್ರಗಳ ಬಲದಿಂದಲೇ ಒಂದು ಸಮೃದ್ಧ ಸಮಾಜವನ್ನು ನಿರ್ಮಿಸಬಹುದು ಎಂದರು. ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕಾರ್ಯಕ್ರಮಗಳು ಸಮುದಾಯದ ಬಾಂಧವ್ಯವನ್ನು ಬಲಪಡಿಸುವ ಮಹತ್ವದ ವೇದಿಕೆಗಳಾಗಿವೆ. ಶಿಕ್ಷಣ ಕೇವಲ ಜ್ಞಾನ ನೀಡುವುದಲ್ಲ, ಬದಲಾಗಿ ವ್ಯಕ್ತಿತ್ವ ವಿಕಸನಕ್ಕೆ ದಾರಿ ತೋರುವ ಶಕ್ತಿಯಾಗಿದೆ ಎಂದರು.
ಕಡ್ತಲ ಗ್ರಾಪಂ ಅಧ್ಯಕ್ಷ ಸುಕೇಶ್ ಹೆಗ್ಡೆ, ಅಜೆಕಾರು ಪಿಎಸ್‌ಐ ಮಹೇಶ್ ಟಿ.ಎಂ., ಪ್ರಮುಖರಾದ ಯೋಗೀಶ್ ಮಲ್ಯ, ಹರೀಶ್ ಪಂಚಮಿ, ಅಖಿಲೇಶ್ ಶೆಟ್ಟಿ, ವಾಮನ ಭಟ್, ದಯಾನಂದ ನಾಯಕ್, ವನಿತಾ ಮಯ್ಯ, ಡಾ.ಎಂ.ವಿಶ್ವನಾಥ ಪೈ, ಡಾ.ಪ್ರಭಾಕರ್ ಶಾಸ್ತ್ರಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಸನತ್ ಕೋಟ್ಯಾನ್, ಯುವ ರೆಡ್‌ಕ್ರಾಸ್ ಶಿಬಿರಾಧಿಕಾರಿ ದೀಪಿಕಾ, ರೋವರ್ಸ್, ರೇಂಜರ್ಸ್ ಶಿಬಿರಾಧಿಕಾರಿಗಳಾದ ಅಕ್ಷತಾ ನಾಯಕ್, ಸ್ಟಾಲಿನ್ ಡಾನ್ಸನ್ ಡಿಸೋಜ ಉಪಸ್ಥಿತರಿದ್ದರು.