ಕೋಟ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಹಸಿರು ಹೆಜ್ಜೆ ಅಭಿಯಾನಕ್ಕೆ ಪರಿಸರ ಪ್ರೇಮಿ ಅವಿನಾಶ್ ಕಾಮತ್ ಚಾಲನೆ ನೀಡಿದರು. ಪ್ರಮುಖರಾದ ಕುಸುವಾ ಮನೋಜ್, ಕೆ.ರಾಜಾರಾಮ್ ಐತಾಳ್, ವಿಜಯ ಪೂಜಾರಿ ಮೊದಲಾದವರಿದ್ದರು.
ಕೋಟ: ಪ್ರಕೃತಿಗಾಗಿ ಪ್ರತಿಯೊಬ್ಬರೂ ಸಮಯ ಮೀಸಲಿರಿಸಬೇಕಿದೆ. ಭೂತನ್ ದೇಶದಂತೆ ನಮ್ಮ ದೇಶದಲ್ಲೂ ಒಂದೊಂದು ಗಿಡಗಳನ್ನು ನೆಟ್ಟರೆ ದೇಶವೇ ಹಸಿರು ಸಂಪತ್ತಿನಿಂದ ಕೂಡುತ್ತದೆ ಎಂದು ಪರಿಸರಪ್ರೇಮಿ ಅವಿನಾಶ್ ಕಾಮತ್ ಹೇಳಿದರು.
ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂ, ರೋಟರಿ ಕ್ಲಬ್, ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಸಂಯೋಜನೆಯೊಂದಿಗೆ ಆಯೋಜಿಸಲಾಗಿದ್ದ ಹಸಿರು ಹೆಜ್ಜೆ ಅಭಿಯಾನದಲ್ಲಿ ಮಾತನಾಡಿದರು.
ಅಧ್ಯಕ್ಷ ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚವರ್ಣ ಸದಸ್ಯ ಮಹೇಶ್ ಬೆಳಗಾವಿ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಕುಸುವಾ ಮನೋಜ್, ಕಾರ್ಯದರ್ಶಿ ಕೆ.ರಾಜಾರಾಮ್ ಐತಾಳ್, ಗೋಳಿಬೆಟ್ಟು ಎಸ್‌ಡಿಎಂಸಿ ಮಾಜಿ ಉಪಾಧ್ಯಕ್ಷ ವಿಜಯ ಪೂಜಾರಿ, ತಾ.ಪಂ. ವಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಗೋಳಿಬೆಟ್ಟು ಬೊಬ್ಬರ್ಯ ಸಂಟನೆ ಕಾರ್ಯದರ್ಶಿ ರಾಜೇಶ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮೀನಾರಾಯಣ ಮೊದಲಾದವರಿದ್ದರು. ಪ್ರಭಾಕರ್ ಮಣೂರು ಸ್ವಾಗತಿಸಿದರು. ಕಲಾವತಿ ಅಶೋಕ್ ನಿರೂಪಿಸಿದರು. ಮಹೇಶ್ ಮೊಗವೀರ ವಂದಿಸಿದರು.