ರುಕ್ಮಯ ಮೂಲ್ಯ ದಂಪತಿಗೆ ನಿರ್ಮಿಸಲಾದ ನೂತನ ಮನೆ ‘ನಮೋ ಕುಟೀರ’ದ ಕೀಲಿಕೈ ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಫಲಾನುಭವಿಗೆ ಹಸ್ತಾಂತರಿಸಿದರು. ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ದೇವಿಪ್ರಸಾದ್ ಪೊಯ್ಯತ್ತಾಯ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಮಾಜದಲ್ಲಿ ತಳಮಟ್ಟದ ವ್ಯಕ್ತಿಗೆ ಸವಲತ್ತು ಸಿಕ್ಕರೆ ಅದೇ ಅಭಿವೃದ್ಧಿಯ ಸಂಕೇತ. ಮನೆಯಿಲ್ಲದ ವ್ಯಕ್ತಿ, ನೀರು, ವಿದ್ಯುತ್, ಕನಿಷ್ಠ ಪಿಯು ಶಿಕ್ಷಣದಂತಹ ಮೂಲ ಸೌಕರ್ಯ ಇಲ್ಲದ ಮನೆಯೊಂದಿದ್ದರೆ ಆ ಊರು ಅಭಿವೃದ್ಧಿ ಆಗಿಲ್ಲ ಎಂದರ್ಥ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು.
ಕುರ್ನಾಡು ಗ್ರಾಪಂ ವ್ಯಾಪ್ತಿಯ ಅಬೆಮಾರ್ ಎಂಬಲ್ಲಿ ರುಕ್ಮಯ ಮೂಲ್ಯ-ವಿಜಯ ವೃದ್ಧ ದಂಪತಿಗೆ ಸಂತೋಷ್ ಕುಮಾರ್ ರೈ ಬೋಳಿಯಾರ್ ನಿರ್ಮಿಸಿದ ಆರನೇ ‘ನಮೋ ಕುಟೀರ’ದ ಕೀಲಿಕೈ ಫಲಾನುಭವಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಡ್ಯಾರ್ ಶಿವಗಿರಿ ಮಠದ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾಣಂತೂರು ಧರ್ಮಅರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿಪ್ರಧಾನ ಪದ್ಮನಾಭ, ಅಮ್ಮೆಂಬಳ ಸೇವಾ ಸಹಕಾರಿ ಸಂಘ ಪ್ರಬಂಧಕ ನಾಗರಾಜ್ ಭಟ್, ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಡಾ.ಅಣ್ಣಯ್ಯ ಕುಲಾಲ್, ಬಂಟ್ವಾಳ ತಾಪಂ ಮಾಜಿ ಸದಸ್ಯ ಸೇಸಪ್ಪ ಟೈಲರ್, ಆರ್‌ಎಸ್‌ಎಸ್ ಮುಖಂಡ ಪಿ.ಎಸ್.ಪ್ರಕಾಶ್, ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಮುಡಿಪು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಕುರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ನಾಯಕ್ ಕುರ್ನಾಡುಗುತ್ತು, ಕುಲಾಲ ಸಂಘ ಮುಡಿಪು ವಲಯಾಧ್ಯಕ್ಷ ಪುಂಡರೀಕಾಕ್ಷ, ಹಿರಿಯರಾದ ನಾರಾಯಣ ಶೆಟ್ಟಿ ಬಲೆತ್ತೋಡು, ಜಯರಾಮ ಶೆಟ್ಟಿ ಕಂಬಳಪದವು, ಯಶವಂತ ಅಮೀನ್, ಚಂದ್ರಹಾಸ ಉಳ್ಳಾಲ್, ನಾರಾಯಣ ಕುಂಪಲ, ರಾಧಾಕೃಷ್ಣ ರೈ ಉಮಿಯ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ರೈ ಬೋಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ರೈ ಪಜೀರ್ ನಿರೂಪಿಸಿದರು.