ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ದಾನಿಗಳಿಗೆ ಸನ್ಮಾನ ನಡೆಯಿತು. ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತಪದ್ಮಾನಾಭ ಆಸ್ರಣ್ಣ, ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಮೊದಲಾದವರಿದ್ದರು. 
ಉಡುಪಿ

ಧಾರ್ಮಿಕ ಕಾರ್ಯಗಳಿಂದ ಸೌಹಾರ್ದ ಸ್ಥಾಪನೆ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ದೇವಸ್ಥಾನಗಳು ಸಮಾಜದಲ್ಲಿ ಧಾರ್ಮಿಕ ನಂಬಿಕೆ, ಸಂಸ್ಕೃತಿ ಮತ್ತು ಒಗ್ಗಟ್ಟನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ಬ್ರಹ್ಮಕಲಶೋತ್ಸವದಂತಹ ಮಹೋತ್ಸವಗಳು ಭಕ್ತರಲ್ಲಿ ಭಕ್ತಿ, ಶ್ರದ್ಧೆ ಮತ್ತು ಧಾರ್ಮಿಕ ಚೇತನೆಯನ್ನು ಹೆಚ್ಚಿಸುವುದರ ಜತೆಗೆ ಸಮಾಜದಲ್ಲಿ ಸೌಹಾರ್ದವನ್ನು ಬಲಪಡಿಸುತ್ತವೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಸ್ವಾಮೀಜಿ ಹೇಳಿದರು.
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅನಂತಪದ್ಮಾನಾಭ ಆಸ್ರಣ್ಣ ದೀಪ ಪ್ರಜ್ವಲನೆ ಮಾಡಿದರು. ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆನುವಂಶಿಕ ಮೊಕ್ತೇಸರ, ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ, ಕರ್ನಾಟಕ ಬ್ಯಾಂಕ್ ಡಿಜಿಎಂ ಬಿ.ಗೋಪಾಲಕೃಷ್ಣ ಸಾಮಗ, ಖ್ಯಾತ ನಟ ಅರವಿಂದ ಬೋಳಾರ್, ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಉದ್ಯಮಿ ಗುರುಪ್ರಸಾದ್ ಅಮೀನ್ ನಾನಿಲ್, ಕೊಡಿಯಾಲ್‌ಬೈಲ್ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ವಿಶ್ವಾನಾಥ ಮಂಕಿಸ್ಟಾೃಡ್, ಉದ್ಯಮಿ ಶಶೀಂದ್ರ ಎಂ.ಸಾಲ್ಯಾನ್, ಜಯಕೃಷ್ಣ ಕೋಟ್ಯಾನ್, ಪುಷ್ಪ ದಯಾನಂದ, ರಮೇಶ್ ಬಂಗೇರ, ರಾಜೇಂದ್ರ ಪ್ರಸಾದ್ ಎಕ್ಕಾರ್, ಶಿವಣ್ಣ ಅಂಚನ್, ನವೀನ್ ಕುಮಾರ್ ಗುಜ್ಜರಬೆಟ್ಟು, ವಿಠಲ ಕಾಂಚನ್, ನಿತಿನ್ ಕುಂದರ್, ಅನಿಲ್ ಪೂಜಾರಿ, ಸತೀಶ್ ಶೆಟ್ಟಿ ಎಕ್ಕಾರ್, ಉದಯ ಸುವರ್ಣ, ಯಶವಂತ ಸಾಲ್ಯಾನ್, ಸುಧಾಕರ ಅಮೀನ್ ಉಪಸ್ಥಿತರಿದ್ದರು.
ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ರಾಮಚಂದ್ರ ಯಾನೆ ಅಪ್ಪು ಕಾರ್ನವರ್‌ಗೆ ಗೌರವಾರ್ಪಣೆ ನಡೆಯಿತು. ದಾನಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ರಾಜೇಂದ್ರ ಪ್ರಸಾದ್ ಎಕ್ಕಾರ್ ದಾನಿಗಳ ಪಟ್ಟಿ ವಾಚಿಸಿದರು, ರಘುರಾಮ್ ಕೋಟ್ಯಾನ್ ಕುರ್ಕಾಲು ಸ್ವಾಗತಿಸಿ, ಸಚ್ಚೀಂದ್ರ ಅಂಬಾಗಿಲು ನಿರೂಪಿಸಿದರು.

ಹಣ್ಣು ಉಚಿತ ವಿತರಣೆ

ಬ್ರಹ್ಮಕಲಕೋತ್ಸವದ ದಿನವಾದ ಭಾನುವಾರ ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠ, ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ, ಕಿನ್ನಿಗೋಳಿ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬ ಮಹಿಳಾ ವೃಂದದ ವತಿಯಿಂದ ಭಕ್ತರಿಗೆ ಉಚಿತ ಕಲ್ಲಂಗಡಿ ಹಣ್ಣಿನ ಸೇವೆ ನಡೆಯಲಿದೆ. ಪಡು ಪಣಂಬೂರು, ಹಳೆಯಂಗಡಿ, ಪಾವಂಜೆ ಪರಿಸರದ ಭಕ್ತಾದಿಗಳಿಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನಕ್ಕೆ ಉಚಿತ ಬಸ್ ಸೇವೆ ಯವಸ್ಥೆ ಮಾಡಲಾಗಿದೆ.
ಆಯತ ಕದಳೀಯಾಗ, ಗಣಯಾಗ
ಶುಕ್ರವಾರ ಬೆಳಗ್ಗೆ ಆಯುತ ಕದಳೀಯಾಗ, ಗಣಯಾಗ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ಮಹಿಳಾ ವೃಂದದವರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ, 4.30ರಿಂದ ಶಕ್ತಿದಂಡಕ ಪೂಜೆ, ಶಾಂತಿಹೋಮ, ಆಶ್ಲೇಷಾ ಬಲಿ ನಡೆಯಿತು.
ಕ್ಷೇತ್ರದ ಆನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ಶ್ರೀ ನಿವಾಸ ಯಾನೆ ಅಪ್ಪು ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಂಬೈ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಆಡಳಿತ ಮೊಕ್ತೇಸರ ಚಂದ್ರಶೇಖರ ಬೆಳ್ಚಡ, ಕಾರ್ಯಾಧ್ಯಕ್ಷ ವಾಮನ್ ಇಡ್ಯಾ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ, ಸಮಿತಿ ಕೋಶಾಧಿಕಾರಿ ಸುರೇಶ್ ಬಂಗೇರ , ರಾಜೇಂದ್ರ ಪ್ರಸಾದ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.