ಪುಣ್ಚಪ್ಪಾಡಿ ಶಾಲಾ ಮಕ್ಕಳ ಪ್ರಕೃತಿ ನಡಿಗೆ ಕಾರ್ಯಕ್ರಮ ನಡೆಯಿತು. ರಶ್ಮಿತಾ ಜೈನ್, ಶೋಭಾ ಕೆ., ಭಾಗೀರಥಿ, ಲೀಲಾವತಿ, ಭವಾನಿ ಕೆ. ಮತ್ತಿತರಿದ್ದರು.
ಕಡಬ: ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಪರಿಸರ ನಡಿಗೆ ಕಾರ್ಯಕ್ರಮದ ಅಂಗವಾಗಿ ಮಕ್ಕಳನ್ನು ಕಂಗು, ತೆಂಗು, ಹಣ್ಣಿನ ತೋಟಗಳಿಗೆ ಕರೆದುಕೊಂಡು ಹೋಗಿ ಮಾಹಿತಿ ನೀಡಲಾಯಿತು.
ನಾಟಿ ವೈದ್ಯ ಕೃಷ್ಣಪ್ಪ ಪೂಜಾರಿ ದೇವಸ್ಯ, ಹೊನ್ನಪ್ಪ ಪೂಜಾರಿ, ನಾಟಿ ವೈದ್ಯ ಸಜಿತ್ ದೇವಸ್ಯ, ಪ್ರಗತಿಪರ ಕೃಷಿಕ ಪಿ.ಡಿ.ಕೃಷ್ಣ ಕುಮಾರ್ ರೈ ದೇವಸ್ಯ, ಪ್ರಗತಿಪರ ಕೃಷಿಕ ಗಿರಿಶಂಕರ ಸುಲಾಯ ಅವರ ಮನೆಗೆ ಮಕ್ಕಳ ಭೇಟಿ ನೀಡಿದರು. ಊರಿನ ಪರಿಸರ, ಕಾಡು, ಗುಡ್ಡೆ, ತೋಟಗಳು, ಕೆರೆಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಅಪೂರ್ಣ ಅನುಭವ ಪಡೆದುಕೊಂಡರು. ತರವಾಡು ಮನೆ, ದೈವಸ್ಥಾನ, ನಾಗಬನಗಳು ಮತ್ತು ಪರಿಸರ ರಕ್ಷಣೆಗಿರುವ ಸಂಬಂಧದ ಬಗ್ಗೆ ಮಾಹಿತಿ ಪಡೆದುಕೊಂಡರು.
ಮುಖ್ಯಶಿಕ್ಷಕಿ ರಶ್ಮಿತಾ ಜೈನ್ ನರಿಮೊಗರು, ಇಕೋ ಕ್ಲಬ್ ನೋಡಲ್ ಶಿಕ್ಷಕಿ ಶೋಭಾ ಕೆ.ಕಾರ್ಯಕ್ರಮ ಸಂಯೋಜಿಸಿದರು. ಅತಿಥಿ ಶಿಕ್ಷಕರಾದ ಭಾಗೀರಥಿ, ಲೀಲಾವತಿ, ಭವಾನಿ ಕೆ.ನಿರ್ವಹಿಸಿದರು. ಸರಸ್ವತಿ ಡಿ.ರೈ, ಪಾಲಕರಾದ ಪ್ರದೀಪ್, ಪೂರ್ಣಿಮಾ, ವಾರಿಜಾ, ನಳಿನಿ, ಜಯಶ್ರೀ ಭಾಗವಹಿಸಿದ್ದರು.