ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ 70ನೇ ಮಾಲಿಕೆ ಕಾರ್ಯಕ್ರಮದಲ್ಲಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಗುರು ಸಂದೇಶ ನೀಡಿದರು. ಜಯಪ್ರಕಾಶ್, ಶೇಖರ್ ನರಿಕೊಂಬು, ಜನಾರ್ದನ ಪೂಜಾರಿ, ಚೇತನ, ಅರ್ಜುನ್ ಮೊದಲಾದವರಿದ್ದರು.
ಬಂಟ್ವಾಳ: ಪ್ರಕೃತಿಯ ನಾಶ ಜಗತ್ತು ಸರ್ವನಾಶ ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆ ಸಂದೇಶದ ಸಾರವಾಗಿದೆ. ಪ್ರಕೃತಿ ನಾಶ ಮಾಡಿದರೆ ಅದರ ದುಷ್ಪರಿಣಾಮ ಇಡೀ ಮಾನವಕುಲ ಹಾಗೂ ಜೀವಜಗತ್ತಿನ ಮೇಲೆ ಬೀಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಕಾಪಾಡಿ, ಉಳಿಸಿ, ಬೆಳೆಸಬೇಕು ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.
ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ 70ನೇ ಮಾಲಿಕೆ ಕಾರ್ಯಕ್ರಮದಲ್ಲಿ ಗೋಳಿಮಾರು ಜನಾರ್ದನ ಪೂಜಾರಿ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.
ಬಿಲ್ಲವ ಸಂಘ ವೀರಕಂಭ ಗ್ರಾಮ ಬಿಲ್ಲವ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್, ಶೇಖರ್ ನರಿಕೊಂಬು, ಚೇತನ, ಅರ್ಜುನ್, ಹರ್ಷ, ಯುವವಾಹಿನಿ ಬಂಟ್ವಾಳ ಘಟಕ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ಹರೀಶ್ ಅಜೆಕಲ, ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಶೈಲೇಶ್, ನವೀನ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಸುನೀತಾ ನಿತಿನ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರಾ, ಅರುಣ್, ನಾಗೇಶ್ ಪೊನ್ನೋಡಿ, ಸದಸ್ಯರಾದ ಯಶೋಧರ್, ರಂಜಿತ್, ಉದಯ್, ಸುದೀಪ್ ಸಾಲ್ಯಾನ್, ವಿಘ್ನೇಶ್, ಸತೀಶ್ ಬಾಯಿಲ, ಯತೀಶ್, ಸಾತ್ವಿಕ್, ಕಾರ್ತಿಕ್ ಉಪಸ್ಥಿತರಿದ್ದರು.
ಪ್ರಜಿತ್ ಅಮೀನ್ ಸ್ವಾಗತಿಸಿದರು, ನಾರಾಯಣಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.