ಪಾಂಡೇಶ್ವರ ಹಾಲು ಉತ್ಪಾದಕರ ಸಂದ ವಠಾರದಲ್ಲಿ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಡಾ.ವಿಜಯ ಮಂಜರ್ ಚಾಲನೆ ನೀಡಿದರು. ಪ್ರಮುಖರಾದ ಶೇವಧಿ ಸುರೇಶ್ ಗಾಣಿಗ, ವಲೇರಿಯನ್ ಡಿಸೋಜ, ಶ್ಯಾಮಲಾ ಪಾಂಡೇಶ್ವರ ಮೊದಲಾದವರಿದ್ದರು.  
ಉಡುಪಿ

ಪರಿಸರ ರಕ್ಷಣೆ ದೇವರ ಪೂಜೆಯಷ್ಟೇ ಶ್ರೇಷ್ಠ

ಕೋಟ: ಪ್ರಕೃತಿಯನ್ನು ಆರಾಧಿಸುವ, ಪರಿಸರ ಸಂರಕ್ಷಿಸುವ ಸೇವೆ ಭಗವಂತನಿಗೆ ಸಲ್ಲಿಸುವ ಪೂಜೆಯಷ್ಟೇ ಶ್ರೇಷ್ಠ ಎಂದು ಪಾಂಡೇಶ್ವರ ಯೋಗ ಗುರುಕುಲ ಮುಖ್ಯಸ್ಥ ಡಾ.ವಿಜಯ ಮಂಜರ್ ಹೇಳಿದರು.
ಪಾಂಡೇಶ್ವರ ಹಾಲು ಉತ್ಪಾದಕರ ಸಂದ ವಠಾರದಲ್ಲಿ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ 310ನೇ ಪರಿಸರಸ್ನೇಹಿ ಅಭಿಯಾನ ಪ್ರಯುಕ್ತ ಗೀತಾನಂದ ಫೌಂಡೇಶನ್, ಪೇತ್ರಿ ಅನ್ನಪೂರ್ಣ ನರ್ಸರಿ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂ, ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂ ಸಹಯೋಗದೊಂದಿಗೆ ಭಾನುವಾರ ಹಸಿರು ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಾತನಾಡಿದರು.
ಮನೆ ಮನೆಗೆ ಪಾರಿಜಾತ ಹಾಗೂ ಲಕ್ಷ್ಮಣ ಫಲ ಗಿಡಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಪರಿಸರ ಜಾಗೃತಿ ಪ್ರತಿಜ್ಞಾವಿಧಿಯನ್ನು ಪಂಚವರ್ಣ ಸದಸ್ಯ ಮಹೇಶ್ ಬೆಳಗಾವಿ ಬೋಧಿಸಿದರು. ಪಂಚವರ್ಣ ಸಂಟನೆ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂದ ಅಧ್ಯಕ್ಷೆ ವಲೇರಿಯನ್ ಡಿಸೋಜ, ಸಿಇಒ ಶ್ಯಾಮಲಾ ಪಾಂಡೇಶ್ವರ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

ಸಾಸ್ತಾನದಲ್ಲಿ ಅಭಿಯಾನ

ಪಂಚವರ್ಣ ಸಂಟನೆ ಹಸಿರು ಹೆಜ್ಜೆ ಅಂಗವಾಗಿ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ವಿವಿಧ ಭಾಗಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತು. ಶಿಕ್ಷಣ ತಜ್ಞ ಗಣೇಶ್ ಜಿ., ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವಾಜಿ ಅಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ವಾಜಿ ಕಾರ್ಯದರ್ಶಿ ಐರೋಡಿ ವಿಟ್ಠಲ ಪೂಜಾರಿ ಭಾಗಿಯಾದರು.