ಉಡುಪಿಯಲ್ಲಿ ಯುಸಿಇಎ ಆಯೋಜಿಸಿದ್ದ ಇಂಜಿನೀಯರ್ಸ್ ಮೀಟ್ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರನ್ನು ಗೌರವಿಸಲಾಯಿತು. ಕೆ.ರಂಜನ್, ಗಣೇಶ್ ಬೈಲೂರು, ಭರತ್ ಭೂಷಣ್, ಕೆ. ಹರೀಶ್ ಕುಮಾರ್ ಇದ್ದರು.
* ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಅನಿಸಿಕೆ
ಉಡುಪಿ: ಭವಿಷ್ಯದ ದೃಷ್ಟಿಯಿಂದ ಉಡುಪಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ. ಉಡುಪಿ ಪ್ರಸಿದ್ಧಿಯ ಜತೆಗೆ ರಸ್ತೆ, ಕಟ್ಟಡಗಳ ನಿರ್ಮಾಣ ಕ್ಷೇತ್ರದ ವೇಗದಲ್ಲಿ ಪ್ರಗತಿ ಹೊಂದುವಲ್ಲಿ ಇಲ್ಲಿನ ಇಂಜಿನಿಯರ್ಸ್ಗಳ ಕೊಡುಗೆ ಶ್ಲಾಘನೀಯ. ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ ಸಹ ಕೈ ಜೋಡಿಸಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಕರೆ ನೀಡಿದರು.
ಉಡುಪಿಯ ಕಿದಿಯೂರು ಹೋಟೆಲ್ನ ಅನಂತಶಯನ ಹಾಲ್ನಲ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ (ಯುಸಿಇಎ) ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ಸ್ ಮೀಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ನಿಮಾರ್ಣಗೊಂಡ 'ಅಭಿನಯ' ಕಿರುಚಿತ್ರ ಪ್ರದರ್ಶಿಸಲಾಯಿತು. ಸಂಸ್ಥೆಯ ವತಿಯಿಂದ ಗಣೇಶ್ ಕಾಂಡ್ಲೂರು ಅವರನ್ನು ಗೌರವಿಸಲಾಯಿತು.
ಉಪಾಧ್ಯಕ್ಷರಾದ ಗಣೇಶ್ ಬೈಲೂರು, ಭರತ್ ಭೂಷಣ್, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥರಿದ್ದರು. ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.