ಚಿಗುರಿದ ಕನಸು ಕೃತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಬಿಡುಗಡೆಗೊಳಿಸಿದರು. ರಾಧಾಕೃಷ್ಣ ಕೆ., ಗೋಪಾಲಕೃಷ್ಣ ಶಾಸ್ತ್ರಿ, ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಸುಭಾಷ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು: ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಪೋಷಿಸುವ ಮೂಲಕ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ನಡೆಯಬೇಕಾಗಿದೆ ಎಂದು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಹೇಳಿದರು.
ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಘಟಕದ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದ ಸಭಾಂಗಣದಲ್ಲಿ ಚಿಗುರಿದ ಕನಸು ಕೃತಿ ಬಿಡುಗಡೆ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿ ರಾಧಾಕೃಷ್ಣ ಕೆ., ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಸಂಘಟಕ ಸುಭಾಷ್ ಪೆರ್ಲ, ಪ್ರಾಂಶುಪಾಲ ಬಿಂದುಸಾರ ಶೆಟ್ಟಿ, ಮುಖ್ಯಶಿಕ್ಷಕಿ ಸುರೇಖಾ ಕೆ., ಸವಿತಾ ಟೀಚರ್, ಪತ್ರಕರ್ತ ವೀಜಿ ಕಾಸರಗೋಡು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ನಿರ್ದೇಶಕ ಕೆ.ವಿ.ರಮೇಶ, ಉಳ್ಳಾಲ ತಾಲೂಕು ಚುಸಾಪ ಅಧ್ಯಕ್ಷ ಎಡ್ವರ್ಡ್ ಲೋಬೊ, ಪ್ರಣವ್ ಕುಮಾರ್ ಆಳ್ವ, ಬಿಂದಿಯಾ ಆಳ್ವ, ನಗರಸಭೆ ಮಾಜಿ ಸದಸ್ಯ ಶಂಕರ ಕೆ., ವಿಷ್ಣು ಕೆ.ಶ್ಯಾನುಭೋಗ್, ಯೋಗೀಶ್ ಎನ್.ಕೋಟೆಕಣಿ, ಶ್ರೀಕಾಂತ್ ಉಪಸ್ಥಿತರಿದ್ದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ ಕೂಡ್ಲು ಸ್ವಾಗತಿಸಿದರು. ಕಲಾವಿದ ದಿವಾಕರ ಪಿ. ವಂದಿಸಿದರು. ಕವಯಿತ್ರಿ ಹರ್ಷಿತಾ ನಿರೂಪಿಸಿದರು. ಕನ್ನಡ ಗ್ರಾಮದ ಕುಶಲ ಕುಮಾರ ಕೆ. ಕಾರ್ಯಕ್ರಮ ಸಂಯೋಜಿಸಿದರು.
ಕವಿಗೋಷ್ಠಿಯಲ್ಲಿ ಎಂ.ಎ.ಮುಸ್ತಾಫಾ ಬೆಳ್ಳಾರೆ, ರವೀಂದ್ರನ್ ಪಾಡಿ, ಅವನಿ ಕರಿಂಬಿಲ, ಸುಮನಾ ಕರಿಂಬಿಲ, ಸರ್ವಮಂಗಳ ಪುಣಿಂಚಿತ್ತಾಯ, ಎಡ್ವರ್ಡ್ ಲೋಬೊ, ಸಮೃದ್ಧಿ ಆಳ್ವ, ಸುತೀಕ್ಷಾ ಆಳ್ವ, ಶಶಿಕಲಾ ಟೀಚರ್ ಕುಂಬ್ಳೆ, ನೀತಿಕಾ ಚೌಕಿ, ಕೃಪೇಶ್ ಜಿ.ಎಸ್.ಕಲ್ಲಕಟ್ಟ ಕವನ ವಾಚಿಸಿದರು.
ಕೃತಿ ಬಿಡುಗಡೆ
ವಿದ್ಯಾರ್ಥಿ ಪ್ರತಿಭೆ ಸಮೃದ್ಧಿ ಆಳ್ವ ಅವರ ಚೊಚ್ಚಲ ಕವನ ಸಂಕಲನ ‘ಚಿಗುರಿದ ಕನಸು’ ಕೃತಿಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಬಿಡುಗಡೆಗೊಳಿಸಿದರು. ವಕೀಲೆ ಪರಿಮಳಾ ರಾವ್ ಕೃತಿ ಪರಿಚಯ ಮಾಡಿದರು. ಸಮೃದ್ಧಿ ಆಳ್ವ ಅವರನ್ನು ಸನ್ಮಾನಿಸಲಾಯಿತು.