ಕಿನ್ನಿಗೋಳಿ ರಾಜರತ್ನಪುರದ ಸರಾಪ್ ಅಣ್ಣಯ್ಯಚಾರ್ಯ ಸಭಾಭವನದಲ್ಲಿ ಮಾವು, ಹಲಸು ವಿವಿಧ ಹಣ್ಣುಗಳ ಹಬ್ಬ, ಸಾವಯವ ಉತ್ಪನ್ನಗಳ ಮಾರಾಟ, ವೈವಿಧ್ಯಮಯ ತಿನಿಸುಗಳ ಮಾರಾಟ ಕಾರ್ಯಕ್ರಮಕ್ಕೆ ಗುರುರಾಜ್ ಮಲ್ಲಿಗೆಯಂಗಡಿ ಚಾಲನೆ ನೀಡಿದರು. ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಜಗದೀಶ್ ಆಚಾರ್ಯ, ಕಟ್ಟಡ ಸಮಿತಿ ಪೃಥ್ವಿರಾಜ್ ಆಚಾರ್ಯ ಇದ್ದರು.  
ಉಡುಪಿ

ಯುವ ಜನಾಂಗದಿಂದ ಸ್ವಉದ್ಯೋಗಕ್ಕೆ ಪ್ರೋತ್ಸಾಹ

ಕಿನ್ನಿಗೋಳಿ: ಯುವ ಜನಾಂಗ ಸ್ವಉದ್ಯೋಗಕ್ಕೆ ಪ್ರೋತ್ಸಾಹಿಸಿ ಯಶಸ್ಸು ಗಳಿಸಿ ಸಾವಯವ ಕೃಷಿಯತ್ತ ಜನ ಆಕರ್ಷಿತರಾಗಬೇಕು. ಈ ಮೂಲಕ ಆರೋಗ್ಯ ಪೂರ್ಣ ಬದುಕು ನಮ್ಮದಾಗಬೇಕು ಎಂದು ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಹೇಳಿದರು.
ಕಿನ್ನಿಗೋಳಿ ಸಜ್ಜನ ಬಂಧುಗಳು, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಕಿನ್ನಿಗೋಳಿ ರಾಜರತ್ನಪುರದ ಸರಾಪ್ ಅಣ್ಣಯ್ಯಚಾರ್ಯ ಸಭಾಭವನದಲ್ಲಿ 4ನೇ ವರ್ಷದ ಮಾವು, ಹಲಸು ವಿವಿಧ ಹಣ್ಣುಗಳ ಹಬ್ಬ, ಸಾವಯವ ಉತ್ಪನ್ನಗಳ ಮಾರಾಟ, ವೈವಿಧ್ಯಮಯ ತಿನಿಸುಗಳ ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಜಗದೀಶ್ ಆಚಾರ್ಯ, ಕಟ್ಟಡ ಸಮಿತಿ ಪೃಥ್ವಿರಾಜ್ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದ ಅಧ್ಯಕ್ಷೆ ಅನಿತಾ ಪೃಥ್ವಿರಾಜ್ ಆಚಾರ್ಯ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಕಿನ್ನಿಗೋಳಿ ಪಪಂ ಸದಸ್ಯ ಪ್ರಣೀಕ್, ಪ್ರಕಾಶ್ ಆಚಾರ್ಯ, ದೀಪಕ್ ರೊಡ್ರಿಗಸ್, ಹಿಲ್ಡಾ ಡಿಸೋಜ, ಜಯಪಾಲ ಶೆಟ್ಟಿ ಐಕಳ, ದಿನೇಶ್ ಆಚಾರ್ಯ, ಮಿಥುನ್ ಕೊಡೆತ್ತೂರು, ರಘುನಾಥ ಕಾಮತ್, ಕಿಶೋರ್ ಶೆಟ್ಟಿ, ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.