ಮಂದಾರ ವಿ.ಕಾಳೆ ಹಾಗೂ ಮನೋಹರ ಶೆಟ್ಟಿ ಚೆಸ್ ಆಡುವ ಮೂಲಕ ಚೆಸ್ ಸ್ಪರ್ಧೆಗೆ ಚಾಲನೆ ನೀಡಿದರು. ಪ್ರಮುಖರಾದ ವಾಸುದೇವ ಶೆಟ್ಟಿ, ಡಾ.ವ್ಯಾಸರಾಜ ತಂತ್ರಿ, ಶ್ರೀಧರ ಶೆಣೈ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಮಕ್ಕಳ ಮೇಲೆ ಒತ್ತಡ ಹೇರದೆ, ಅವರ ಪ್ರತಿಭೆ, ಆಸಕ್ತಿ ಮತ್ತು ಕನಸುಗಳಿಗೆ ಪ್ರೋತ್ಸಾಹ ನೀಡಬೇಕು. ಸ್ವತಂತ್ರವಾಗಿ ಬೆಳೆಯಲು ಅವಕಾಶ ನೀಡಿದಾಗ ಮಾತ್ರ ಅವರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಉಜ್ವಲ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಎಂಆರ್‌ಪಿಎಲ್ ಸಿಎಸ್‌ಆರ್ ವ್ಯಾನೇಜರ್ ಮಂದಾರ ವಿ.ಕಾಳೆ ಹೇಳಿದರು.
ಕಾಪು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ವತಿಯಿಂದ ಆಫಿಲೆನ್ಸ್ ಟೆಕ್ನಾಲಜಿ ಸಹಯೋಗದೊಂದಿಗೆ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಸಹಕಾರದೊಂದಿಗೆ ಶ್ರೀ ಹಳೇ ವಾರಿಯಮ್ಮ ಸಭಾಭವನದಲ್ಲಿ ಎರಡು ದಿನಗಳ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಷಿಪ್ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ಚೆಸ್ ಸ್ಪರ್ಧೆ ಪ್ರತಿಭಾನ್ವಿತ ಮಕ್ಕಳಿಗೆ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಎಂದರು.
ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಮಾತನಾಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಉಡುಪಿ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಉಡುಪಿ, ಉಜ್ವಲ್ ಗ್ರೂಪ್ ವ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಕುವಾರ್ ಶೆಟ್ಟಿ, ಮಂಗಳೂರು ಅಫೀಲಿಯನ್ಸ್ ಟೆಕ್ನಾಲಜಿ ಸಂಸ್ಥಾಪಕ ಅವಿನಾಶ್ ಶೆಟ್ಟಿ, ಶ್ರೀ ಹಳೆ ವಾರಿಯಮ್ಮ ದೇವಸ್ಥಾನ ವಾಜಿ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ, ಕೆಎಸ್‌ಸಿಎ ಬೆಂಗಳೂರು ಅಧ್ಯಕ್ಷ ಮಧುಕರ ಟಿ.ಎನ್., ಅಸೋಸಿಯೇಶನ್ ಆಫ್ ಸರ್ಜರಿ ಆಫ್ ಇಂಡಿಯಾ ಚೇರ್ಮನ್ ಡಾ.ರಾಜಗೋಪಾಲ್ ಶೆಣೈ, ಲೋಕೇಶ್ ಬೆಳ್ಚಡ, ಪೆನ್ವಿಲ್ ಸೋನ್ಸ್ ಪಾಂಗಳ, ನಾಗೇಶ್ ಕಾರಂತ್ ಪಾಂಗಳ ಉಪಸ್ಥಿತರಿದ್ದರು. ಕಾಪು ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು, ಸ್ಥಾಪಕ ಸಾಕ್ಷಾತ್ ಯು.ಕೆ. ಸ್ವಾಗತಿಸಿದರು. ನಿರ್ದೇಶಕಿ ಸೌಂದರ್ಯ ಯು.ಕೆ. ನಿರೂಪಿಸಿದರು.