ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಚಂದ್ರಕಲಾ ಎಸ್., ಲಿಜಿ ನೊರೋನ್ಹ, ಸುಮಂಗಲಿ ರಾವ್, ಮೈಮೂನ ಎಂ.ಎ.ಹರೇಕಳ, ವಜ್ರ ಗುಜರನ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಸಮರ್ಪಣಾ ಪರಿವಾರ್ ಮಹಿಳಾ ಘಟಕ ಅಧ್ಯಕ್ಷೆ ಕುಸುಮಾ ಪ್ರಶಾಂತ್ ಉಡುಪ ಇದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರತಿಯೊಬ್ಬ ಮಹಿಳೆಗೂ ದೇವರು ಶಕ್ತಿ ಕೊಟ್ಟಿದ್ದಾನೆ. ಹತ್ತು ಮಕ್ಕಳನ್ನು ಸಾಕುವ ಶಕ್ತಿ ತಾಯಿಗಿದೆ, ಆದರೆ ಹತ್ತು ಮಕ್ಕಳಿಗೆ ಒಂದು ತಾಯಿಯನ್ನು ಸಾಕುವ ಶಕ್ತಿ ಇಲ್ಲದ ಪರಿಸ್ಥಿತಿ ಇಂದಿನದ್ದಾಗಿದೆ. ದೇಶದಲ್ಲಿ ಮೀಸಲಾತಿ ಬಂದ ಬಳಿಕ ಮಹಿಳೆಯರು ಎಲ್ಲ ರಂಗದಲ್ಲಿ ಮಿಂಚುವಂತಾಗಿದೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಹೇಳಿದರು.
ಮಂಗಳೂರಿನ ಸಮರ್ಪಣಾ ಪರಿವಾರ್ ಟ್ರಸ್ಟ್ ಆಶ್ರಯದಲ್ಲಿ ‘ಮಹಿಳಾ ದಿನಾಚರಣೆ - 2026’ ಪ್ರಯುಕ್ತ ಕೊಲ್ಯದಲ್ಲಿ ಸಾಧಕಿಯರಿಗೆ ಸನ್ಮಾನ ಹಾಗೂ ಪರಿವಾರ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಾದ ಮೈಮೂನ ಎಂ.ಎ.ಹರೇಕಳ, ಚಂದ್ರಕಲಾ ಎಸ್., ಲಿಜಿ ನೊರೋನ್ಹ, ಸುಮಂಗಲಿ ರಾವ್, ವಜ್ರ ಗುಜರನ್ ಅವರನ್ನು ಸನ್ಮಾನಿಸಲಾಯಿತು.
ಸಮರ್ಪಣಾ ಪರಿವಾರ್ ಮಹಿಳಾ ಘಟಕ ಅಧ್ಯಕ್ಷೆ ಕುಸುಮಾ ಪ್ರಶಾಂತ್ ಉಡುಪ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೌಮ್ಯಾ ಆರ್.ಶೆಟ್ಟಿ, ತೀಯಾ ಸಮಾಜ ಅಧ್ಯಕ್ಷ ಜಯಂತ್ ಕೊಂಡಾಣ, ಲಯನ್ಸ್ ಕ್ಲಬ್ ಪೆರ್ಮನ್ನೂರು ವಲಯಾಧ್ಯಕ್ಷೆ ಜೆಸಿಂತಾ ಮೆಂಡೋನ್ಸ, ಛೋಟಾ ಮಂಗಳೂರು ಘಟಕಾಧ್ಯಕ್ಷೆ ಹರಿಣಾಕ್ಷಿ, ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಸುರೇಶ್ ಆಚಾರ್ಯ, ರೈಲ್ವೇ ಸಲಹಾ ಮಂಡಳಿ ಸದಸ್ಯೆ ಸುಷ್ಮಾ ಕೋಟ್ಯಾನ್, ಸರ್ವಜ್ಞಾ ಅಕಾಡೆಮಿ ಆಡಳಿತ ವ್ಯವಸ್ಥಾಪಕ ಸುರೇಶ್ ಎಂ.ಎಸ್, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದಿನೇಶ್ ನಾಯಕ್, ಸಮಾಜಸೇವಕಿ ಗಾಯತ್ರಿ ಕಿಶೋರ್ ಕುತ್ತಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯ್ಸ ಮೊದಲಾದವರು ಉಪಸ್ಥಿತರಿದ್ದರು.
ಸಮರ್ಪಣಾ ಪರಿವಾರ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ಶಿಕ್ಷಕರಾದ ಜಯಲಕ್ಷ್ಮೀ, ಚಂದ್ರಶೇಖರ ಹಾಗೂ ವಸಂತ ರೈ ಸನ್ಮಾನ ಪತ್ರ ವಾಚಿಸಿದರು. ವಸಂತ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ನಿರೂಪಿಸಿದರು.