Death 
ಉಡುಪಿ

ಎಟಿಎಂ ಕೌಂಟರ್ ಗಾಜು ಮೈಮೇಲೆ ಬಿದ್ದು ನೌಕರ ಮೃತ್ಯು

ಕಾಸರಗೋಡು: ಎಟಿಎಂ ಕೌಂಟರಿನ ಗಾಜು ಒಡೆದು ದೇಹಕ್ಕೆ ಬಿದ್ದು ಮಂಗಳೂರಿನಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದ ಕಾಞಂಗಾಡು ನಿತ್ಯಾನಂದ ಆಶ್ರಮ ಪರಿಸರ ನಿವಾಸಿ ಬಾಲಕೃಷ್ಣ(56) ಮೃತಪಟ್ಟಿದ್ದಾರೆ. ಇವರು ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕಿನ ಮಂಗಳೂರು ಶಾಖೆಯ ನೌಕರನಾಗಿದ್ದರು.
ಬ್ಯಾಂಕಿನ ಕರ್ತವ್ಯ ಮುಗಿಸಿ ಕಚೇರಿ ಪಕ್ಕದ ಎಟಿಎಂ ಕೌಂಟರಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಸಂದರ್ಭ ಸ್ಥಳದಲ್ಲಿ ಬೇರೆ ಯಾರೂ ಇಲ್ಲದಿದ್ದ ಹಿನ್ನೆಲೆ ಬಹಳ ಹೊತ್ತಿನ ಬಳಿಕ ಗ್ರಾಹಕರೊಬ್ಬರು ಆಗಮಿಸಿದಾಗ ಮಾಹಿತಿ ತಿಳಿದು, ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಗಳೂರಿನಲ್ಲಿ ವಾಸ್ತವ್ಯಹೂಡಿ, ವಾರಕ್ಕೆ ಒಂದು ಬಾರಿ ಕಾಞಂಗಾಡಿನ ಮನೆಗೆ ತೆರಳುತ್ತಿದ್ದರು.