ಪಡುಬಿದ್ರಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇನ್ನಂಜೆ ಗ್ರಾಮದ ಭಾಸ್ಕರ ಆಚಾರ್ಯ(78) ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಬುಧವಾರ ಪತ್ತೆಯಾಗಿದೆ. 20 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಔಷಧೋಪಚಾರ ಮಾಡುತ್ತಿದ್ದರು.
ಪ್ರತಿ ದಿನ ಪೇಟೆಗೆ ಹೋಗಿ ಬರುತ್ತಿದ್ದ ಅವರು ಜುಲೈ 6ರಂದು ಕಾಪುವಿಗೆ ಹೋಗಿಬರುವುದಾಗಿ ಮನೆಯವರಿಗೆ ತಿಳಿಸಿ ತೆರಳಿದ್ದರು. ರಾತ್ರಿಯಾದರೂ ಮನಗೆ ವಾಪಸ್ ಬಾರದೆ ಇದ್ದು, ಎಲ್ಲರೂ ಸೇರಿ ಪರಿಸರದ ಸುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅವರು ತೆಗೆದುಕೊಂಡು ಹೋಗಿದ್ದ ಕೊಡೆ ಹಾಗೂ ಚಪ್ಪಲಿಗಳು ಹಾಡಿಯಲ್ಲಿ ಸಿಕ್ಕಿದ್ದು, ಬುಧವಾರ ಮನೆಯಿಂದ 2 ಕಿ.ಮೀ. ದೂರದ ಬಾವಿಯಲ್ಲಿ ಅವರ ಮೃತದೇಹ ತೇಲಾಡುತ್ತಿರುವುದನ್ನು ಸ್ಥಳೀಯರು ಮನೆಯವರಿಗೆ ತಿಳಿಸಿದ್ದರು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.