suicide 
ಉಡುಪಿ

ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ

ಇಂದಿರಾ ಎನ್ ಕೆ
ಕಾರ್ಕಳ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ಲೂರು ಗ್ರಾಮದಲ್ಲಿ ವಿಪರೀತ ಕುಡಿತದ ಅಭ್ಯಾಸದಿಂದ ಜೀವನದಲ್ಲಿ ಮನನೊಂದು ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಲ್ಲೂರು ಗ್ರಾಮದ ಕೇರ ಲಂಗಾಜೆ ಮನೆಯ ನಿವಾಸಿ ಬಾಬು ಗೌಡ(75) ಆತ್ಮಹತ್ಯೆ ಮಾಡಿಕೊಂಡವರು. ಅವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಊಟೋಪಚಾರವನ್ನು ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಬುಧವಾರ ಸಂಜೆ 7ಕ್ಕೆ ಪುತ್ರಿ ಶೋಭಾ ಅವರು ತಂದೆಗೆ ಊಟ ಕೊಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಚಹಾ ಹಾಗೂ ತಿಂಡಿ ನೀಡಲು ಹೋದಾಗ ಬಾಬು ಅವರು ಮನೆಯಲ್ಲಿರಲಿಲ್ಲ.
ಮನೆ ಸುತ್ತಮುತ್ತ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಶುಕ್ರವಾರ ಬೆಳಗ್ಗೆ ಮನೆ ಸಮೀಪವಿರುವ ಸರ್ಕಾರಿ ಬಾವಿಯ ಬಳಿ ಚಪ್ಪಲಿ ಕಂಡುಬಂದಿದೆ. ಅನುಮಾನಗೊಂಡು ಬಾವಿಯೊಳಗೆ ನೋಡಿದಾಗ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಪುತ್ರ ಶೇಖರ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.