ಶ್ರೀ ಶಂಕರಾಚಾರ್ಯ ಜಯಂತಿ ಸಮಾರಂಭವನ್ನು ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ತಾರಾನಾಥ ಹೊಳ್ಳ ಉದ್ಘಾಟಿದರು. ಪ್ರಮುಖರಾದ ಪಟ್ಟಾಭಿರಾಮ ಸೋಮಯಾಜಿ, ಎಂ.ಶಿವರಾಮ ಉಡುಪ, ಪಿ.ಸಿ.ಹೊಳ್ಳ , ಸಿ.ಸುಬ್ರಾಯ ಉರಾಳ ಮುಂತಾದವರು ಉಪಸ್ಥಿತರಿದ್ದರು. 
ಉಡುಪಿ

ಜಗತ್ತಿನಲ್ಲಿ ವೇದ ಧರ್ಮ ಶ್ರೇಷ್ಠವಾಗಿಸುವಲ್ಲಿ ಶ್ರಮ

ಪ್ರಮುಖ ಮುಖ್ಯಾಂಶಗಳು

  • ಕೆ.ತಾರಾನಾಥ ಹೊಳ್ಳ ಹೇಳಿಕೆ
  • ಶ್ರೀ ಶಂಕರಾಚಾರ್ಯ ಜಯಂತಿ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಕೋಟ
ಶ್ರೀ ಶಂಕರರು ಭಾರತದ ನಾಲ್ಕು ಕಡೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಭಾರತದಲ್ಲಿ ಅದ್ವೆತ ಸಿದ್ಧಾಂತವನ್ನು ಶಾಶ್ವತವಾಗಿ ನೆಲೆಗೊಳಿಸಿ, ಇಂದಿಗೂ ಜಗತ್ತಿನಲ್ಲಿ ವೇದ ಧರ್ಮ ಶ್ರೇಷ್ಠವಾಗುವಂತೆ ಮಾಡಿದ ಅಪ್ರತಿಮ ಸಾಧನಾ ಮೂರ್ತಿ. ಅವರ ಹೆಸರನ್ನು ಶಾಶ್ವತವಾಗಿರಿಸುವ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ತಾರಾನಾಥ ಹೊಳ್ಳ ಹೇಳಿದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಶ್ರೀ ಶಂಕರಾಚಾರ್ಯ ಜಯಂತಿ ಸಮಾರಂಭ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜಿನ ಸಂಸತ ಉಪನ್ಯಾಸಕಿ ಸುದಕ್ಷಿಣಾ ಆರ್​.ಉಡುಪ ಮಾತನಾಡಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಎಂ.ಶಿವರಾಮ ಉಡುಪ, ಉಪಾಧ್ಯಕ್ಷ ಪಿ.ಸಿ.ಹೊಳ್ಳ, ಸಿ.ಸುಬ್ರಾಯ ಉರಾಳ ಮುಂತಾದವರು ಉಪಸ್ಥಿತರಿದ್ದರು. ಸಭಾದ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನಾಗರಾಜ ಉಪಾಧ್ಯ ವಂದಿಸಿದರು.