ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಂಸ್ಥಾಪಕ ದಿನಾಚರಣೆಯಲ್ಲಿ ಸುದರ್ಶನ ವೈ.ಎಸ್. ಮಾತನಾಡಿದರು. ಪ್ರಮುಖರಾದ ಕೆ.ಎಲ್.ಕುಂಡಂತಾಯ, ಸಂಜೀವ ನಾಯ್ಕ, ಕಾಂತಿ ಭಟ್, ಶ್ರೀಕಾಂತ ರಾವ್ ಮತ್ತಿತರರಿದ್ದರು.
ಪಡುಬಿದ್ರಿ: ವಿಭುದೇಶ ತೀರ್ಥ ಶ್ರೀಪಾದರು ಅಧ್ಯಾತ್ಮ ಹಾಗೂ ಲೌಕಿಕ ಎರಡನ್ನು ಸಮನ್ವಯ ಮಾಡಿಕೊಂಡು ಶಿಕ್ಷಣ ಸಂಸ್ಥೆ, ವೇದ ಪಾಠಶಾಲೆ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಜತೆಗೆ ಶಿಕ್ಷಣ ಕ್ರಾಂತಿ ಮಾಡಿದವರು.
ಅದಮಾರಿನಿಂದ ಪ್ರಾರಂಭವಾದ ಶಿಕ್ಷಣ ಕ್ರಾಂತಿ ದೆಹಲಿಗೂ ತಲುಪಿದ್ದು, ಇಂದು 51ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳಾಗಿ ಎಲ್ಲೆಡೆ ವಿದ್ಯಾ ಪ್ರಸಾರ ಮಾಡುತ್ತಿವೆ ಎಂದು ಅದಮಾರು ಹಳೇ ವಿದ್ಯಾರ್ಥಿ ಸಂ ಉಪಾಧ್ಯಕ್ಷ ಕೆ.ಎಲ್.ಕುಂಡಂತಾಯ ಹೇಳಿದರು.
ಅದಮಾರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಸಂಸ್ಥಾಪಕ ದಿನಾಚರಣೆಯಲ್ಲಿ ಮಾತನಾಡಿದರು. ಅದಮಾರು ಶಿಕ್ಷಣ ಸಂಸ್ಥೆಗಳ ಗೌರವ ಜತೆ ಕಾರ್ಯದರ್ಶಿ ಸುದರ್ಶನ್ ವೈ.ಎಸ್. ಮಾತನಾಡಿದರು. ವಿಭುದೇಶ ತೀರ್ಥರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೆ.ಎಲ್.ಕುಂಡಂತಾಯ ವಿದ್ಯಾರ್ಥಿ ಮಂಡಳಿ ಉದ್ಘಾಟಿಸಿದರು.
ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದ ಅನಘಾ ಕಾವೂರ್ ಹಾಗೂ ಅಂಕಿತಾ ಎಸ್.ಭಟ್ ಅವರಿಗೆ ಕುಂಜೂರು ಕೇಶವ ಉಡುಪ ಸ್ಮಾರಕ ಪಾರಿತೋಷಕವನ್ನು ಶ್ರೀಧರ್ ಕೆ.ಉಡುಪ ಹಾಗೂ ಉಡುಪಿಯ ನಿರಂಜನ್ ಭಟ್ ನೀಡಿದರು. ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ, ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.
ಮುಖ್ಯಶಿಕ್ಷಕ ಶ್ರೀಕಾಂತ್ ರಾವ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜು ಪ್ರಾಂಶುಪಾಲ ಸಂಜೀವ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಅನನ್ಯಾ ಗೌಡ, ಧನ್ವಿತ್, ಕೃತಾರ್ಥ, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಾಂತಿ ಭಟ್ ಉಪಸ್ಥಿತರಿದ್ದರು. ಜಯಶಂಕರ ಕಂಗಣ್ಣಾರು, ಕೇಶವ ಉಡುಪ ಸ್ಮಾರಕ ಬಹುಮಾನಗಳ ವಿವರ ಹಾಗೂ ದೇವಿಪ್ರಸಾದ್ ಬೆಳ್ಳಿಬೆಟ್ಟು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರ ವಿವರ ಓದಿದರು. ಆಶಿತಾ ಸ್ವಾಗತಿಸಿದರು. ಮನಸ್ವಿನಿ ವಂದಿಸಿದರು. ಆದ್ವಿ ನಿರೂಪಿಸಿದರು.