ಶ್ರೀ ಮಾಧವ ಶಿಶು ಮಂದಿರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್, ವೆಂಕಟರಮಣ ರಾವ್ ಮಂಕುಡೆ, ಯು.ಜಿ.ರಾಧ ಮೊದಲಾದವರಿದ್ದರು.  
ಉಡುಪಿ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಪ್ರೇರಣೆ

ಉಪ್ಪಿನಂಗಡಿ: ಮಗುವಿಗೆ ನೀಡಿದ ಸಂಸ್ಕಾರದ ಒಂದು ಬಿಂದು ಮಗುವಿನ ಮನೆ ಮತ್ತು ಪರಿಸರವನ್ನೇ ಪ್ರಕಾಶಿಸಬಲ್ಲದು. ಹೀಗಾಗಿ ಶಿಶು ಮಂದಿರಗಳು ಸಂಸ್ಕಾರ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿನ ಶಿಕ್ಷಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಣೆಯಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಉಪ್ಪಿನಂಗಡಿಯ ವೇದಶಂಕರನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಪ್ರಾರಂಭೋತ್ಸವ ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದರು.
ಸ್ವಹಿತ ಚಿಂತನೆಯಿಂದ ಪರಹಿತ ಚಿಂತನೆಯತ್ತ ಮನಸ್ಸನ್ನು ಪರಿವರ್ತಿಸುತ್ತಾ ಎಲ್ಲರೊಂದಿಗೆ ಬೆರೆತು ಬದುಕುವ ಕಲೆಯನ್ನು ಎಳವೆಯಲ್ಲೇ ನೀಡಿದಾಗ ಆ ಮಗು ಪಾಲಕರಿಗೆ, ಸಮಾಜ ಮತ್ತು ರಾಷ್ಟ್ರಕ್ಕೆ ಸಂಪತ್ತಾಗಿ ರೂಪುಗೊಳ್ಳುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ, ಶ್ರೀ ರಾಮ ಶಾಲಾ ಸಂಚಾಲಕರಾದ ಯು.ಜಿ.ರಾಧ, ಶಿಶು ಮಂದಿರದ ಅಧ್ಯಕ್ಷ ಹರಿರಾಮಚಂದ್ರ, ಉಪಾಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಾತಕೃಷ್ಣ ಆಚಾರ್ಯ, ಕೋಶಾಧಿಕಾರಿ ಗಾಯತ್ರಿ ವಸಂತ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಶೆಟ್ಟಿ, ಶಿಶು ಮಂದಿರದ ಸ್ಥಳದಾನಿ ಗೋವಿಂದ ಭಟ್, ಆಡಳಿತ ಮಂಡಳಿ ಸದಸ್ಯರಾದ ಜಯಶ್ರೀ ಜನಾರ್ದನ್, ಎನ್.ರಾಘವೇಂದ್ರ ನಾಯಕ್, ಯು.ರಾಜೇಶ್ ಪೈ, ಪ್ರಮುಖರಾದ ಧನಂಜಯ್ ನಟ್ಟಿಬೈಲು ಮೊದಲಾದವರು ಉಪಸ್ಥಿತರಿದ್ದರು. ಶ್ರೀಕಾಂತ್ ಭಟ್ ಪ್ರಾರಂಭೋತ್ಸವದ ವೈದಿಕ ವಿಧಿ ವಿಧಾನ ನೆರವೇರಿಸಿದರು. ಶಿಶು ಮಂದಿರದ ಮಾತಾಜಿಗಳಾದ ಚೈತ್ರಾ ಹಾಗೂ ಚಂದ್ರಾವತಿ ಸಹಕರಿಸಿದರು.