ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಸುಮಂತ್ ಕುವಾರ್ ಜೈನ್ ಬಿ. ಉದ್ಘಾಟಿಸಿದರು. ಭುಜಬಲಿ ಕಂಬಳಿ, ದೇಜಪ್ಪ ಬಾಚಕೆರೆ, ಕೆ.ರಾಜೇಂದ್ರ ಕಕ್ಯಪದವು ಮೊದಲಾದವರಿದ್ದರು. 
ಉಡುಪಿ

ವಿದ್ಯೆಯಿಂದ ಲಭಿಸುತ್ತದೆ ಜ್ಞಾನ, ಗೌರವ

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ವಿದ್ಯೆಯಿಂದ ಜ್ಞಾನ, ಗೌರವ, ಅಧಿಕಾರ ಹಾಗೂ ಉತ್ತಮ ಜೀವನ ಸಾಧ್ಯವಿದೆ. ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಸವಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುವಾರ್ ಜೈನ್ ಬಿ. ಹೇಳಿದರು.
ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢಶಾಲೆಗೆ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ದಾನಿಗಳು ಕೊಡವಾಡಿದ ಸಮವಸ್ತ್ರ ಮತ್ತು ಲೇಖನ ಸಾವಾಗ್ರಿ ವಿತರಣೆ, ಎಸ್ಸೆಸ್ಸೆಲ್ಸಿ ಸಾಧಕರಿಗೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಾದ ರತ್ನದೇವ್ ಪುಂಜಾಲಕಟ್ಟೆ, ಲಕ್ಷ್ಮಣ ಭಂಡಾರಿ ಪುಣ್ಕೆದಡಿ, ಸದಾಶಿವ ಆಚಾರ್ಯ ಕುರುವರಗೋಳಿ, ಡಿ.ಚಂದ್ರ ಯಾನೆ ಕೊರಗಪ್ಪ ಪೂಜಾರಿ, ರಾಜೀವಿ ಅವರಿಗೆ ಪಂಚದುರ್ಗಾ ಪ್ರಶಸ್ತಿ ಪ್ರದಾನಿಸಲಾಯಿತು. ಎಸ್ಸೆಸ್ಸೆಲ್ಸಿ ಸಾಧಕರನ್ನು, ದಾನಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾವಾಗ್ರಿ, ಕೊಡೆ, ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಟಕದ ಗೌರವಾಧ್ಯಕ್ಷ ಭುಜಬಲಿ ಕಂಬಳಿ, ದೇಜಪ್ಪ ಬಾಚಕೆರೆ, ಕೆ.ರಾಜೇಂದ್ರ ಕಕ್ಯಪದವು, ಸುರೇಶ್ ಮೈರ, ವಸಂತ ಸಾಲ್ಯಾನ್ ರಾಮನಗರ, ಅಕ್ಬರ್ ಆಲಿ, ಪ್ರಶಾಂತ್ ಶುಭಹಾರೈಸಿದರು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಸತ್ಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಾಯಿಲಪ್ಪ ಸಾಲ್ಯಾನ್, ರು ಶೆಟ್ಟಿ ನಡುವಲಚ್ಚಿಲ್, ಚೇತನ್ ಹೂರ್ದೊಟ್ಟು, ಸುಧಾಕರ ಎಚ್., ವಿಶ್ವನಾಥ ಸಾಲ್ಯಾನ್ ಬಿತ್ತ, ವಿಂಧ್ಯಾಶ್ರೀ, ಮುತ್ತಪ್ಪ ಗೌಡ ಅಗಲ, ವೀರೇಂದ್ರ ಕುವಾರ್ ಜೈನ್, ಜಗನ್ನಾಥ ಶೆಟ್ಟಿ, ಯತೀಂದ್ರ ಚೌಟ, ಬಾಲಕೃಷ್ಣ ಮಡಿವಾಳ, ವಷಭರಾಜ್ ಜೈನ್, ಶಾಲಾಭಿವೃದ್ಧಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಸತ್ಯ ಸಾಯಿ ಸೇವಾ ಸಮಿತಿ, ಹಳೇ ವಿದ್ಯಾರ್ಥಿ ಸಂದ ಸದಸ್ಯರು, ಶಿಕ್ಷಕ ವೃಂದ, ಪಾಲಕರು ಉಪಸ್ಥಿತರಿದ್ದರು.
ಉಳಿ ದಾಮೋದರ ನಾಯಕ್ ಸ್ವಾಗತಿಸಿದರು. ಯೋಗೀಶ್ ಕುವಾರ್ ವಂದಿಸಿದರು. ಪುರುಷೋತ್ತಮ ಸನ್ಮಾನ ಪತ್ರ ವಾಚಿಸಿದರು. ಚಂದ್ರಹಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.