ಮೊಗವೀರ ಮಹಾಜನ ಸೇವಾ ಸಂ ಕುಂದಾಪುರ ಶಾಖೆ ನೇತೃತ್ವದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಡಾ.ಜಿ.ಶಂಕರ್, ಸಂತೋಷ್ ಪುತ್ರನ್, ಸುರೇಶ ಆರ್.ಕಾಂಚನ್ ಮೊದಲಾದವರಿದ್ದರು. 
ಉಡುಪಿ

ಸಮಾಜದ ಎಲ್ಲಾ ಮಕ್ಕಳಿಗೆ ದೊರೆಯುವ ಶಿಕ್ಷಣ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಸಮಾಜದ ಪ್ರತಿಯೊಬ್ಬ ಮಗು ಉತ್ತಮ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಅವಕಾಶಗಳ ಸದ್ಬಳಕೆ ಮಾಡಿಕೊಂಡು ಸಾಧನೆಯ ಪಥದಲ್ಲಿ ಮುನ್ನಡೆಯಬೇಕು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಕುಂದಾಪುರ ಶಾಖೆ ನೇತೃತ್ವದಲ್ಲಿ ಕುಂದಾಪುರ ಮೊಗವೀರ ಭವನದಲ್ಲಿ ಭಾನುವಾರ ನಡೆದ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂಬಯಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸುರೇಶ ಆರ್.ಕಾಂಚನ್ ಪ್ರತಿಭಾ ಪುರಸ್ಕಾರ ನೀಡಿದರು. ಮೊಗವೀರ ಭವನದಲ್ಲಿ ಮಹಿಷಾಸುರಮರ್ದಿನಿ ಸಭಾಂಗಣದ ದ್ವಾರ ಮಂಟಪ ಉದ್ಘಾಟಿಸಲಾಯಿತು. ಹೆವ್ಮಾಡಿ ಜನತಾ ಪದವಿಪೂರ್ವ ಕಾಲೇಜು ಉಪನ್ಯಾಸಕ ಉದಯ ನಾಯ್ಕ ಶೈಕ್ಷಣಿಕ ಮಾಹಿತಿ ನೀಡಿದರು.

ದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೊಗವೀರ ಮಹಾಜನ ಸೇವಾ ಸಂ ಉಪಸಮಿತಿ ಕುಂದಾಪುರ ಶಾಖೆ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್, ಎನ್.ಡಿ.ಚಂದನ್, ಪ್ರಧಾನ ಕಾರ್ಯದರ್ಶಿ ಗಣೇಶ ಮೆಂಡನ್, ಶಾಖಾ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆ.ಕಾಂಚನ್, ಎಂ.ಎಂ.ಸುವರ್ಣ, ಕಾರ್ಯದರ್ಶಿ ಪ್ರಭಾಕರ ಸೇನಾಪುರ, ಡಾ.ಅಶೋಕ, ಮೊಗವೀರ ಯುವ ಸಂ

ಟನೆ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ಹೆ

ಮ್ಮಾ

ಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಬೇಬಿ ಜಿ.ನಾಯ್ಕ ಉಪಸ್ಥಿತರಿದ್ದರು.

ಸದಾನಂದ ಬಳ್ಕೂರು ಸ್ವಾಗತಿಸಿದರು. ಉದಯ ಕುವಾರ್ ಹಟ್ಟಿಯಂಗಡಿ ಪ್ರಸ್ತಾವಿಸಿದರು. ಲೋಹಿತಾಶ್ವ ಆರ್.ಕುಂದರ್ ಮತ್ತು ಸುರೇಶ ವಿಠಲವಾಡಿ ನಿರೂಪಿಸಿದರು. ಪ್ರಭಾಕರ ಸೇನಾಪುರ ವಂದಿಸಿದರು.

ಸಾಧಕರಿಗೆ ಗೌರವಾರ್ಪಣೆ

19 ವಯೋವಾನದ ಭಾರತ ಪುಟ್ಬಾಲ್ ತಂಡಕ್ಕೆ ಆಯ್ಕೆಯಾಗಿ ನೇಪಾಳದಲ್ಲಿ ನಡೆದ ಇಂಟರ್‌ನ್ಯಾಷನಲ್ ಫುಟ್ಬಾಲ್ ಪಂದ್ಯದಲ್ಲಿ ಭಾರತದ ಪರವಾಗಿ ಆಡಿದ ಕುಂದಾಪುರ ಶ್ರೀ ವೆಂಕಟರಮಣ ಪಿಯು ಕಾಲೇಜು ವಿದ್ಯಾರ್ಥಿ ಹರ್ಷಿತ್ ಬಿ. ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಪ್ರಾರ್ಥನ ಜಿ.ಕುಂಭಾಶಿ, ಸಿಂಚನಾ ಬಾಳಿಕೆರೆ, ಕ್ಷಿಪಾಲಿ ಕುಂದಾಪುರ, ತನ್ವಿತಾ ಮರವಂತೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.