ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ 25 ಪರಿಶಿಷ್ಟ ಜಾತಿ ರೈತರಿಗೆ ಕಾವೇರಿ ಕೋಳಿ ಮರಿಗಳ ವಿತರಿಸಲಾಯಿತು. ಡಾ.ಹರಿಣಿ ಕೆ.ಆರ್. ಡಾ.ವಸಂತ್ ಕುಮಾರ್ ಶೆಟ್ಟಿ, ಡಾ.ಹರೀಶ್ ಶೆಣೈ, ಡಾ.ಮಲ್ಲಿಕಾರ್ಜುನ ಮತ್ತಿತರರು ಇದ್ದರು. 
ಉಡುಪಿ

ಕೋಳಿ ಸಾಕಾಣಿಕೆಯಿಂದ ಆರ್ಥಿಕ ಪ್ರಗತಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಡಬ

ಗ್ರಾಮೀಣ ಭಾಗದಲ್ಲಿ ಹಿತ್ತಲಿನಲ್ಲಿ ಕೋಳಿಗಳನ್ನು ಸಾಕುವುದರಿಂದ ರೈತರಿಗೆ ಪೌಷ್ಟಿಕಾಂಶಯುಕ್ತ ಮೊಟ್ಟೆ ಮತ್ತು ಮಾಂಸ ನಿರಂತರ ದೊರೆಯುವುದರಿಂದ ಕುಟುಂಬದ ಪ್ರೋಟೀನ್ ಅವಶ್ಯಕತೆಯನ್ನು ಪೂರೈಸಲು ಸಹಕಾರಿಯಾಗುತ್ತದೆ. ಕೋಳಿ ಸಾಕಾಣಿಕೆ ಹೆಚ್ಚುವರಿ ಆದಾಯದ ಮೂಲವಾಗಿ ರೂಪುಗೊಂಡು ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ಥಿತಿ ಹಾಗೂ ಜೀವನೋಪಾಯವನ್ನು ಬಲಪಡಿಸಲು ಮಹತ್ವದ ಕೊಡುಗೆ ನೀಡುತ್ತದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ವಿಸ್ತರಣಾ ನಿರ್ದೇಶಕ ಡಾ.ಎಸ್.ಆರ್.ಸೋಮಶೇಖರ್ ಹೇಳಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ವತಿಯಿಂದ 25 ಪರಿಶಿಷ್ಟ ಜಾತಿ ರೈತರಿಗಾಗಿ ಕೋಳಿ ಸಾಕಾಣಿಕೆ ತರಬೇತಿ ಹಾಗೂ ಕಾವೇರಿ ಕೋಳಿ ಮರಿಗಳ ವಿತರಣಾ ಕಾರ್ಯಕ್ರಮವನ್ನು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮಾ

ಮಾ

ಮಾ

ಕೃಷಿ ವಿಜ್ಞಾನ ಕೇಂದ್ರದ ಟಕದಲ್ಲಿ ವೈಜ್ಞಾನಿಕವಾಗಿ ಸಾಕಲಾಗಿದ್ದ 21 ದಿನಗಳಾದ ಕಾವೇರಿ ಕೋಳಿ ಮರಿಗಳನ್ನು ಕಡಬ ತಾಲೂಕಿನ ರಾಮಕುಂಜ, ಅಲಂಕಾರು ಹಾಗೂ ಎಡಮಂಗಲ ಗ್ರಾಮಗಳ 25 ಪರಿಶಿಷ್ಟ ಜಾತಿ ರೈತರಿಗೆ ಉಚಿತವಾಗಿ ವಿತರಿಸಲಾಯಿತು. ಒಟ್ಟು 250 ಕೋಳಿ ಮರಿಗಳು ಮತ್ತು 50 ಕೆ.ಜಿ. ಕೋಳಿ ಆಹಾರವನ್ನು ವಿತರಿಸಲಾಯಿತು.