ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ. ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಿದರು. ಪ್ರಮುಖರಾದ ಶ್ಯಾಮಪ್ರಸಾದ ಮಾನ್ಯ, ಹರೀಶ, ಗಂಗಾಧರ, ಶ್ಯಾಮಪ್ರಸಾದ ಸರಳಿ, ಲೀಲಾವತಿ ಮೊದಲಾದವರು ಇದ್ದರು.
ಬದಿಯಡ್ಕ: ಹಿಂದುಳಿದವರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತರುತ್ತಿರುವ ಅನೇಕ ಯೋಜನೆಗಳ ಪ್ರಯೋಜನ ಪಡೆದುಕೊಂಡ ಜನರು ಮುಂದೆ ಬರಬೇಕು. ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಿಗುವ ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಂಡು ಜೀವನಮಟ್ಟ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ. ಹೇಳಿದರು.
ಕೇರಳ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆ ವತಿಯಿಂದ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಕಚೇರಿ, ಕಾಸರಗೋಡು, ಪರಿಶಿಷ್ಟ ವರ್ಗಗಳ ವಿಸ್ತರಣಾ ಕಚೇರಿ ಎಣ್ಮಕಜೆ ನೇತೃತ್ವದಲ್ಲಿ ಅಡಿಯ ಪಣಿಯ ಯೋಜನೆಯಡಿ ಬದಿಯಡ್ಕ ಗ್ರಾಪಂ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿದರು. ಎಸ್‌ಟಿ ವರ್ಕಿಂಗ್ ಗ್ರೂಪ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಗ್ರಾಪಂ ಸದಸ್ಯರಾದ ಹರೀಶ, ಗಂಗಾಧರ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ, ಎಣ್ಮಕಜೆ ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿ ಶಮೀರ್ ಉಪಸ್ಥಿತರಿದ್ದರು. ಸುಮನಾ, ಪ್ರಣವ್ ಗಣೇಶ್, ರೀನಾ ನೇತೃತ್ವ ವಹಿಸಿದ್ದರು.