ಉಡುಪಿ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ದೇಗುಲದ ಮುಂಭಾಗದಲ್ಲಿ ನಿರ್ಮಿಸಿದ್ದ ಪರಿಸರ ಸ್ನೇಹಿ 'ಮಯೂರ' ದ್ವಾರ.
* ಪರ್ಕಳದ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ
ಉಡುಪಿ: ಜಿಲ್ಲೆಯ ಪ್ರಸಿದ್ಧ ಶಿವತಾಣಗಳಲ್ಲೊಂದಾದ ಉಡುಪಿ ತಾಲೂಕಿನ ಪರ್ಕಳದಲ್ಲಿರುವ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ, ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕುಣಿತ ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ರಾತ್ರಿ 9:30ಕ್ಕೆ ರುದ್ರ ದೇವರಿಗೆ ರಂಗಪೂಜೆ ನೆರವೇರಿತು.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಹಾಗೂ ವಾಲಿಬಾಲ್ ಫ್ರೆಂಡ್ಸ್ ಪರ್ಕಳದ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಸುಂದರವಾದ ಪರಿಸರ ಸ್ನೇಹಿ 'ಮಯೂರ ದ್ವಾರ' ನಿರ್ಮಿಸಿದ್ದರು. ತೆಂಗಿನಗರಿ, ತಾಳೆಗರಿ, ಬಾಳೆ ಹಾಗೂ ವಿವಿಧ ಫಲ-ತರಕಾರಿ ಬಳಸಿದ್ದ ಈ ದ್ವಾರ ಶಿವನ ದರ್ಶನಕ್ಕೆ ಬಂದ ಭಕ್ತರ ಗಮನ ಸೆಳೆಯಿತು.