ಉಡುಪಿಯ ಲೋಂಬಾರ್ಡ್ ಆಸ್ಪತ್ರೆಯಲ್ಲಿ ಇಕೋ ಕ್ಲಬ್ನ ವಿದ್ಯಾರ್ಥಿಗಳಿಗೆ ರಾಘವೇಂದ್ರ ಪ್ರಭು ಕರ್ವಾಲು, ಡಾ.ನವೀನ್ ಚಂದ್ರ, ಡಾ. ಕೇವಿನ್ ಪಾಂಡ್ಯನ್ ತರಬೇತಿ ನೀಡಿದರು. ಲಾವಣ್ಯಾ ಇದ್ದರು.
* ಇಕೋ ಕ್ಲಬ್ ನಿರ್ವಹಣೆಯ ತರಬೇತಿ
ಉಡುಪಿ: ಲೋಂಬಾರ್ಡ್ ಮೆಮೊರಿಯಲ್ (ಮಿಷನ್) ಆಸ್ಪತ್ರೆಯ ಸ್ಕೂಲ್ ಆಫ್ ನರ್ಸಿಂಗ್, ಕಾಲೇಜ್ ಆಫ್ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗಾಗಿ ಇಕೋ ಕ್ಲಬ್ ಪ್ರಾರಂಭಿಸಲಾಗಿದೆ. ಕ್ಲಬ್ನ ಪ್ರಮುಖ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ಯಾಕೆ ಬೇಕು ಮತ್ತು ಸದಸ್ಯರ ಪಾತ್ರವೇನು ಎಂಬ ಒಂದು ದಿನದ ಕಾರ್ಯಾಗಾರ ಮಿಷನ್ ಆಸ್ಪತ್ರೆಯ ಮಿನಿ ಹಾಲ್ನಲ್ಲಿ ನಡೆಯಿತು.
ತರಬೇತುದಾರರಾಗಿ ವ್ಯಕ್ತಿತ್ವ ವಿಕಸನ ತರಬೇತಿದಾರ ರಾಘವೇಂದ್ರ ಪ್ರಭು ಕರ್ವಾಲು, ಡಾ.ನವೀನ್ ಚಂದ್ರ, ಡಾ. ಕೇವಿನ್ ಪಾಂಡ್ಯನ್ ತರಬೇತಿ ನೀಡಿದರು. ಉಪನ್ಯಾಸಕಿ ಲಾವಣ್ಯಾ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಪಿಆರ್ಒ ರೋಹಿ ರತ್ನಾಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾವ್ಯಶ್ರೀ ಶೆಟ್ಟಿ, ಸಹನಾ, ಉಷಾ, ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಣ್ಣಯ್ಯ ದಾಸ್, ಸುಂದರ್ ಮೂಡು ಕುಕ್ಕುಡೆ, ಮಿಲ್ಟನ್ ಒಲಿವರ್ ಇತರರು ಉಪಸ್ಥಿತರಿದ್ದರು.