ಉಡುಪಿಯಲ್ಲಿ ಬಂಧಿಸಲ್ಪಟ್ಟ ಆರೋಪಿ ಅಬ್ದುಲ್​ ರೌಫ್​. 
ಉಡುಪಿ

ಮಾದಕ ದ್ರವ್ಯ ಸಾಗಾಟ-ಮಾರಾಟ; ಓರ್ವನ ಬಂಧನ

* ವಿಜಯಪುರ ಕಾರಾಗೃಹಕ್ಕೆ ರವಾನೆ

ಉಡುಪಿ: ಮಾದಕ ದ್ರವ್ಯ ಸಾಗಾಟ, ಮಾರಾಟ ಹಾಗೂ ಸೇವನೆಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಉಡುಪಿ ನಗರ ಪೊಲೀಸರು ಮಂಗಳವಾರ (ಮೇ 19) ಬಂಧಿಸಿದ್ದಾರೆ. ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಅಬ್ದುಲ್​ ಹಮೀದ್​ ರೌಫ್​ (26) ಬಂಧಿತ ಆರೋಪಿ.
ಬಂಧಿತನ ವಿರುದ್ಧ ಮಣಿಪಾಲ, ಉಡುಪಿ ನಗರ ಹಾಗೂ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್​ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿ ತಲಾ 1 ಪ್ರಕರಣ, ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ಮಣಿಪಾಲ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ.
ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿ ದಾಖಲಾದ 3 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಸೇವನೆಗೆ ದಾಖಲಾದ 2 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ.
ಆರೋಪಿಯನನ್ನು ಪಿಐಟಿ ಎನ್​ಡಿಪಿಎಸ್​ ಕಾಯಿದೆಯಡಿ ಬಂಧಿಸಲು ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಅವರ ವರದಿಯ ಮೇರೆಗೆ ಪಶ್ಚಿಮ ವಲಯ ಪೊಲೀಸ್​ ಮಹಾನಿರೀಕ್ಷಕರು ಮೇ 18ರಂದು ಬಂಧನ ಆದೇಶ ಹೊರಡಿಸಿದ್ದರು.
ಆರೋಪಿಯನ್ನು ವಿಜಯಪುರದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶಿಸಲಾಗಿದೆ.