Arrest 
ಉಡುಪಿ

ಮಾದಕವಸ್ತು ಸೇವಿಸಿದಾತ ವಶಕ್ಕೆ

ಇಂದಿರಾ ಎನ್ ಕೆ

ಪಾವಂಜೆ ಸೇತುವೆ ಬಳಿ ಮಾದಕವಸ್ತು ಸೇವನೆ ಮಾಡುತ್ತಿದ್ದಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಲ್ಕಿ ಠಾಣಾ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಅಬ್ಬಾಸ್ ಅಲಿಯಾಸ್ ಜೋಕರ್ ಅಬ್ಬಾಸ್ ಎಂಬಾತ ಸಿಗರೇಟ್ ಸೇದುತ್ತಾ ನಶೆಯಲ್ಲಿದ್ದಂತೆ ಕಂಡುಬಂದಿದ್ದು, ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತುವನ್ನು ಸೇವನೆ ಮಾಡಿರುವುದು ಕಂಡು ಬಂದಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.