ಆಟೋ ನಿಲ್ದಾಣ ತೆರವು ಸಂಬಂಧ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಚಾಲಕರೊಂದಿಗೆ ಮಾತುಕತೆ ನಡೆಸಿದರು. 
ಉಡುಪಿ

ಆಟೋ ನಿಲ್ದಾಣ ತೆರವಿಗೆ ಚಾಲಕರ ವಿರೋಧ

ಇಂದಿರಾ ಎನ್ ಕೆ

ಪಡುಬಿದ್ರಿ:ಕಾಪುಪೇಟೆಯ ಖಾಸಗಿ ಕಟ್ಟಡವೊಂದರಮುಂಭಾಗದಲ್ಲಿರುವ ರಿಕ್ಷಾನಿಲ್ದಾಣವನ್ನು ತೆರವುಗೊಳಿಸಲುಹೈಕೋರ್ಟ್ ಆದೇಶ ನೀಡಿದ್ದು,ಆದೇಶಪಾಲನೆ ಕುರಿತಾಗಿ ಪುರಸಭೆ ರಿಕ್ಷಾಚಾಲಕರು ಮತ್ತು ಮಾಲೀಕರ ಸಂಘದಪ್ರತಿನಿಧಿಗಳಿಗೆ ನೋಟಿಸ್ನೋಡಿತ್ತು.ಇದನ್ನುಖಂಡಿಸಿ ಗುರುವಾರ ಆಟೋ ಚಾಲಕರುಪುರಸಭೆಗೆ ಮುತ್ತಿಗೆ ಹಾಕಲುಯತ್ನಿಸಿದ ಘಟನೆ ನಡೆದಿದೆ.

ಕಾಪುಪೇಟೆಯಲ್ಲಿನ ಖಾಸಗಿ ವ್ಯಕ್ತಿಯೊಬ್ಬರಕುಟುಂಬದ ಜಾಗ ಮತ್ತು ಕಟ್ಟಡದಮುಂಭಾಗದಲ್ಲಿರುವ ರಿಕ್ಷಾನಿಲ್ದಾಣದಿಂದಾಗಿ ಅಂಗಡಿಯಲ್ಲಿರುವವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆಎಂದು ಕುಟುಂಬಸ್ಥರು ಹೈಕೋರ್ಟ್ಮೆಟ್ಟಿಲೇರಿದ್ದರು.

ನ್ಯಾಯಾಲಯಆದೇಶದಂತೆ ಕಾಪು ಪುರಸಭೆಯು ರಿಕ್ಷಾನಿಲ್ದಾಣ ತೆರವುಗೊಳಿಸುವ ವಿಚಾರದಲ್ಲಿಚರ್ಚಿಸಲು ಮತ್ತು ಆದೇಶ ಜಾರಿ ಕುರಿತಾಗಿ ಆಟೋ ಚಾಲಕ ಮತ್ತುಮಾಲೀಕರ ಸಂಘದ ಪ್ರತಿನಿಧಿಗಳಿಗೆನೋಟಿಸ್ ಜಾರಿ ಮಾಡಿತ್ತು.ಏಕಾಏಕಿಯಾಗಿಬಂದ ಹೈಕೋರ್ಟ್‌ನ ಆದೇಶದಿಂದಗಲಿಬಿಲಿಗೊಂಡ ಕಾಪು ಪೇಟೆಯ ಎಲ್ಲಚಾಲಕರು ಆಟೋಗಳೊಂದಿಗೆ ಪುರಸಭೆಗೆಆಗಮಿಸಿ,ಮುತ್ತಿಗೆಹಾಕಲು ಮುಂದಾದರು.ಇದರಿಂದಾಗಿಪುರಸಭೆ ಮುಂಭಾಗ ಕೆಲಕಾಲ ಗೊಂದಲಉಂಟಾಯಿತು.ಮುಖ್ಯಾಧಿಕಾರಿನೀಲಕಂಠ ಮೇಸ್ತ ಚಾಲಕರ ಮನವೊಲಿಸಿವಾಪಸ್ ಕುಳುಹಿಸಿದರು.

ಅಲ್ಲಿಂದಕಾಪು ಪೇಟೆಗೆ ತೆರಳಿದ ಆಟೋ ಚಾಲಕರುನಿಲ್ದಾಣದ ಮುಂಭಾಗ ರಿಕ್ಷಾಗಳನ್ನುನಿಲ್ಲಿಸಿ ಸಾಂಕೇತಿಕವಾಗಿಪ್ರತಿಭಟನೆ ನಡೆಸಿದರು.ಬಾಡಿಗೆನಡೆಸದೇ ಮೌನ ಪ್ರತಿಭಟನೆಗೆಮುಂದಾದರು.

ಈವೇಳೆ ಸ್ಥಳಕ್ಕೆ ಆಗಮಿಸಿದಮುಖ್ಯಾಧಿಕಾರಿ ನೀಲಕಂಠ ಮೇಸ್ತ,ಕಾಪುಕ್ರೈಂ ಎಸ್ಸೈ ಶುಭಕರ,ಸ್ಥಾಯಿಸಮಿತಿ ಅಧ್ಯಕ್ಷ ಕಿರಣ್ ಆಳ್ವಹಾಗೂ ಅಧಿಕಾರಿಗಳು ಮತ್ತುಪ್ರತಿನಿಧಿಗಳಿಗೆ ರಿಕ್ಷಾ ಚಾಲಕರುಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದರು.

ತೆರವುಅನಿವಾರ್ಯ

ಮುಖ್ಯಾಧಿಕಾರಿಮಾತನಾಡಿ,ಹೈಕೋರ್ಟ್ಆದೇಶ ಪಾಲಿಸುವುದು ನಮ್ಮ ಕರ್ತವ್ಯ.ರಿಕ್ಷಾಚಾಲಕರಿಗೆ ಅನ್ಯಾಯವಾಗದಂತೆನೋಡಿಕೊಳ್ಳಲಾಗುವುದು.ಸದ್ಯಕ್ಕೆಹೈಕೋರ್ಟ್‌ನ ಆದೇಶದಂತೆ ರಿಕ್ಷಾನಿಲ್ದಾಣವನ್ನು ಮತ್ತು ನಿಲ್ದಾಣಮುಂಭಾಗದ ಫಲಕವನ್ನು ತೆರವುಗೊಳಿಸುವುದುಅನಿವಾರ್ಯ ಎಂದರು.ಪುರಸಭೆಸದಸ್ಯರಾದ ಶೈಲೇಶ್ ಅಮೀನ್,ಅನಿಲ್ಕುಮಾರ್,ಸರಿತಾಪೂಜಾರಿ ಮೊದಲಾದವರು ದನಿಗೂಡಿಸಿದರು.

ಹಲವುಸುತ್ತಿನ ಮಾತುಕತೆಯ ಬಳಿಕ ರಿಕ್ಷಾಚಾಲಕರು,ನಿಲ್ದಾಣದಬೋರ್ಡ್ ತೆರವಿಗೆ ಕೆಲವು ದಿನಗಳಕಾಲಾವಕಾಶ ನೀಡುವಂತೆ ಮನವಿಮಾಡಿದರು.ಜಿಲ್ಲಾಧಿಕಾರಿಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರಕಂಡುಕೊಳ್ಳುವುದಾಗಿ ಅಧಿಕಾರಿಗಳುಭರವಸೆ ನೀಡಿದರು.

ಮೇಲ್ಮನವಿಸಲ್ಲಿಸುವೆವು

ಹೈಕೋರ್ಟ್ಆದೇಶಕ್ಕೆ ಗೌರವ ಸೂಚಿಸುತ್ತೇವೆ.ರಿಕ್ಷಾನಿಲ್ದಾಣ ತೆರವು ವಿಚಾರದಲ್ಲಿಹೈಕೋರ್ಟ್‌ಗೆ ಮೇಲ್ಮನವಿಸಲ್ಲಿಸುತ್ತೇವೆ.ನಿಲ್ದಾಣತೆರವಿಗೆ ಯಾವುದೇ ಕಾರಣಕ್ಕೂಅವಕಾಶ ಮಾಡಿಕೊಡುವುದಿಲ್ಲ.ತೆರವುಮಾಡುವುದು ಪುರಸಭೆಗೆ ಅನಿವಾರ್ಯವಾದರೆಪರ್ಯಾಯ ಜಾಗದ ಗುರುತಿಸಿ,ನಿಲ್ದಾಣನಿರ್ಮಿಸಿ ಬಳಿಕ ತೆರವು ಮಾಡಲಿ.ಅಷ್ಟರವರೆಗೆಕಾಲಾವಕಾಶ ನೀಡಬೇಕು ಎಂದು ರಿಕ್ಷಾಯೂನಿಯನ್ ಅಧ್ಯಕ್ಷರಾದ ಶೈಲೇಶ್ಅಮೀನ್,ಅಬ್ದುಲ್ರಜಾಕ್ ಕೆ.ಎಂ.ಹೇಳಿದರು.